Friday, May 17, 2024
spot_imgspot_img
spot_imgspot_img

ಸಂಗೀತ ಕ್ಷೇತ್ರದ ಬಾಲ ಕಲಾ ಸಾಧಕ ಅಶ್ಮಿತ್‌ ಎ.ಜೆ ಮಂಗಳೂರು ಇವರಿಗೆ “ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ” ಪ್ರಧಾನ ಸಮಾರಂಭ

- Advertisement -G L Acharya panikkar
- Advertisement -

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರಲೋಕ ಮೋಶದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ಚಿಣ್ಣರಲೋಕ ಸೇವಾ ಬಂಧು (ರಿ.) ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಕರಾವಳಿ ಕಲೋತ್ಸವ – 2024 ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದ ಬಾಲ ಕಲಾ ಸಾಧಕ ಅಶ್ಮಿತ್‌ ಎ.ಜೆ ಮಂಗಳೂರು ಇವರಿಗೆ “ಚಿಣ್ಣ ಸೌರಭ ರಾಜ್ಯ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

5 ನೇ ವರ್ಷದಿಂದ ಸಂಧ್ಯಾ ನಾರಾಯಣ ಇವರಿಂದ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿರುವ ಅಶ್ಮಿತ್‌ ಕರಾವಳಿ ಸರಿಗಮಪ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಫೈನಲ್‌ ಪ್ರವೇಶ ಪಡೆದಿರುತ್ತಾರೆ. ಹಾಗೂ ಸ್ಟಾರ್‌ ಸಿಂಗರ್‌ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆ ಸೇರಿದಂತೆ ಹಲವಾರು ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿರುತ್ತಾರೆ.

ಹಲವಾರು ವೇದಿಕೆಗಳಲ್ಲಿ ಅನೇಕ ಬಹುಮಾನಗಳನ್ನು ಪಡೆದ ಅಶ್ಮಿತ್‌ ಹಲವಾರು ಪ್ರಶಸ್ತಿ, ಗೌರವಗಳನ್ನು ಬಾಚಿಕೊಂಡಿದ್ದಾರೆ. ಸಂಗೀತ ಕ್ಷೇತ್ರ ಮಾತ್ರವಲ್ಲದೆ ತಬಲಾ, ಚೆಂಡೆ, ಗಿಟಾರ್‌, ಕೀಬೋರ್ಡ್‌ ನುಡಿಸುವ ಹವ್ಯಾಸ ಇರುವ ಇವರು ಬಹುಮುಖ ಪ್ರತಿಭೆಯಾಗಿ ಮಿಂಚುತ್ತಿದ್ದಾರೆ. ಸಂಗೀತ ಕ್ಷೇತ್ರದ ಸಾಧನಗೆ ಚಂದನ ಸಾಹಿತ್ಯ ವೇದಿಕೆ ಸುಳ್ಯದ ’ಕನ್ನಡ ಸಾಂಸ್ಕೃತಿಕ ರತ್ನ ಪ್ರಶಸ್ತಿ’ ಪಡೆದುಕೊಂಡಿದ್ದು “ಚಿಣ್ಣ ಸೌರಭ ರಾಜ್ಯ ಪ್ರಶಸ್ತಿ” ತಮ್ಮ ಸಾಧನೆಗೆ ಇನ್ನಷ್ಟು ಹಿರಿಮೆಯನ್ನು ತಂದು ಕೊಟ್ಟಿದೆ.

ಮಂಗಳೂರಿನ ನ್ಯಾಯವಾದಿ ಜಯರಾಮ್‌ ಎ ಮತ್ತು ಆಶಾ ಜಯರಾಮ್‌ ದಂಪತಿಗಳ ಸುಪುತ್ರನಾಗಿರುವ ಅಶ್ಮಿತ್‌ ಮಂಗಳೂರಿನ ಸಂತ ಅಲೋಶಿಯಸ್‌, ಗೊಂಝಾಗ ಶಾಲೆಯಲ್ಲಿ 5 ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.

- Advertisement -

Related news

error: Content is protected !!