





ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಶ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ಬಂಧಿತ ಆರೋಪಿಗಳ ವಿಚಾರಣೆ ಮುಂದುವರಿದಿದೆ. ಕೆಲವರ ಪೋಲೀಸ್ ಕಸ್ಟಡಿ ಅಂತ್ಯಗೊಂಡಿರುವ ಕಾರಣ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಇತ್ತ ಗುಪ್ತಚರ ಇಲಾಖೆ ಸೂಚನೆ ಪ್ರಕಾರ ಸುಹಾಸ್ ಶೆಟ್ಟಿ ಹತ್ಯೆ ಆರೋಪಿಗಳನ್ನು ಮಂಗಳೂರಿನಿಂದ ಬೇರೆ ಬೇರೆ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಇದರ ನಡುವೆ ಪ್ರಮುಖ ಆರೋಪಿ ಚೊಟ್ಟೆ ನೌಷದ್ ಮೇಲೆ ಜೈಲಿನಲ್ಲೇ ದಾಳಿ ಯತ್ನ ನಡೆದಿದೆ. ಮಂಗಳೂರು ಕೇಂದ್ರ ಕಾರಾಗೃಹದಲ್ಲಿ ಹಲವಾರು ಖೈದಿಗಳಿಂದ ಚೊಟ್ಟೆ ನೌಷದ್ ಮೇಲೆ ದಾಳಿ ನಡೆದಿದೆ. ಸಿಕ್ಕ ಸಿಕ್ಕ ವಸ್ತುಗಳಿಂದ ನೌಷಾದ್ ಮೇಲೆ ದಾಳಿಯಾಗಿದೆ.
ಕಲ್ಲು ತೂರಿ ನೌಷಾದ್ ಮೇಲೆ ದಾಳಿ ಸುಹಾಸ್ ಶೆಟ್ಟಿ ಹತ್ಯೆಯ ಪ್ರಮುಖ ಆರೋಪಿ ಚೊಟ್ಟೆ ನೌಷದ್ ಪೊಲೀಸ್ ಕಸ್ಟಡಿ ಇಂದು ಅಂತ್ಯಗೊಂಡಿತ್ತು. ಹೀಗಾಗಿ ಕಾನೂನು ಪ್ರಕ್ರಿಯೆ ಮುಗಿಸಲು ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಗುಪ್ತಚರ ಸೂಚನೆ ಮೇರೆಗೆ ಮಂಗಳೂರಿನಿಂದ ಮೈಸೂರು ಜೈಲಿಗೆ ನೌಷಾದ್ ಸ್ಥಳಾಂತರಿಸಲು ಮುಂದಾಗಿದ್ದರು. ಇದರ ನಡುವೆ ಮಂಗಳೂರು ಜೈಲಿನಲ್ಲಿ ಆಪ್ತರನ್ನು ಭೇಟಿ ಮಾಡಬೇಕು ಎಂದು ಮನವಿ ಮಾಡಿದ್ದ ಕಾರಣ ಮಂಗಳೂರು ಜೈಲಿಗೆ ನೌಷಾದ್ನ ಕರೆತರಲಾಗಿತ್ತು. ಕಾದು ಕುಳಿತಿದ್ದ ಇತರ ಖೈದಿಗಳು ನೌಷಾದ್ ಮೇಲೆ ಕಲ್ಲು ಸೇರಿದಂತೆ ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆದಿದ್ದಾರೆ. ಆದರೆ ಪೊಲೀಸರು ಮದ್ಯಪ್ರವೇಶದಿಂದ ಚೊಟ್ಟ ನೌಷಾದ್ ಪಾರಾಗಿದ್ದಾರೆ.
ಗುಪ್ತಚರ ಮಾಹಿತಿಯಿಂದ ಪೊಲೀಸರು ಅಲರ್ಟ್
ಸುಹಾಸ್ ಶೆಟ್ಟಿ ಹತ್ಯೆ ಆರೋಪಿಗಳ ಮೇಲೆ ಜೈಲಿನಲ್ಲಿ, ಜೈಲಿನಿಂದ ಕೋರ್ಟ್ಗೆ ಕರೆದುಕೊಂಡು ಹೋಗುವ ವೇಳೆ ದಾಳಿಯಾಗುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಪೊಲೀಸರಿಗೆ ಮಾಹಿತಿ ನೀಡಿತ್ತು. ಹೀಗಾಗಿ ಭಾರಿ ಬಂದೋಬಸ್ತ್ ನೀಡಲಾಗಿತ್ತು. ಬಂಧಿತರ ಸುಹಾಸ್ ಶೆಟ್ಟಿ ಹತ್ಯೆ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲು ಪೊಲೀಸರು ಮುಂದಾಗಿದ್ದಾರೆ. ಮಂಗಳೂರು ಜೈಲಿನಲ್ಲಿ ಪ್ರತೀಕಾರದ ಹೆಸರಿನಲ್ಲಿ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಉಳಿದ ಆರೋಪಿಗಳು ಶಿಫ್ಟ್ ಮಾಡಲಾಗುತ್ತಿದೆ. ಆರೋಪಿಗಳ ವಿಚಾರಣೆ ಪೂರ್ಣಗೊಂಡಿರು ಕಾರಣ ಇದೀಗ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದೆ.








