Tuesday, April 23, 2024
spot_imgspot_img
spot_imgspot_img

ಮಂಗಳೂರು: ಡಿ.1 ರಿಂದ ದ.ಕ. ಆಟೊ ರಿಕ್ಷಾಗಳ ಪ್ರಯಾಣ ದರ ಹೆಚ್ಚಳ

- Advertisement -G L Acharya panikkar
- Advertisement -

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಸಂಚರಿಸುವ ಆಟೊ ರಿಕ್ಷಾಗಳ ಪ್ರಯಾಣ ದರವನ್ನು ಪರಿಷ್ಕರಿಸಿಲಾಗಿದ್ದು ಹೊಸ ದರಗಳು ಡಿಸೆಂಬರ್ 1 ರಿಂದ ಜಾರಿಗೆ ಬರಲಿವೆ. ಈ ಬಗ್ಗೆ ದ.ಕ.ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಆದೇಶ ಹೊರಡಿಸಿದ್ದಾರೆ.

1.5 ಕಿ.ಮೀ.ಗೆ ಕನಿಷ್ಠ ದರವನ್ನು 35 ರೂ (ಗರಿಷ್ಠ ಮೂರು ಪ್ರಯಾಣಿಕರು) ನಿಗದಿಪಡಿಸಲಾಗಿದೆ. 1.5 ಕಿಮೀ ನಂತರ ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ 20 ರೂ. ಮೊದಲ 15 ನಿಮಿಷಗಳವರೆಗೆ ಕಾಯುವ ಶುಲ್ಕಗಳು ಉಚಿತವಾಗಿರುತ್ತದೆ. ಮುಂದಿನ 15 ನಿಮಿಷಕ್ಕೆ ಐದು ರೂ.ಪಾವತಿಸಬೇಕಿದೆ. ಪ್ರತೀ 20 ಕೆಜಿ ಲಗೇಜ್ ಉಚಿತವಾಗಿರುತ್ತದೆ. ಬಳಿಕದ 10 ಕೆಜಿಗೆ 5 ರೂ. ಪಾವತಿಸಬೇಕಿದೆ.

ರಾತ್ರಿ 10ರಿಂದ ಮುಂಜಾನೆ 5ರವರೆಗೆ ಪರಿಷ್ಕೃತ ದರದ ಒಂದುವರೆ ಪಟ್ಟು ಹೆಚ್ಚು ತೆಗೆದುಕೊಳ್ಳಬಹುದಾಗಿದೆ. ಡಿ.1ರಿಂದ ತಿಂಗಳೊಳಗೆ ಮೀಟರ್‌ಗಳನ್ನು ತೂಕ ಮತ್ತು ಮಾಪನ ಶಾಸ್ತ್ರ ಇಲಾಖೆಯಿಂದ ಸತ್ಯಾಪನೆ ಮಾಡಿಸಿ ಮುದ್ರೆ ಹಾಕಿಸಿಕೊಳ್ಳಬೇಕು.

ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ನ.15ರಂದು ಆಟೋ ರಿಕ್ಷಾ ದರವನ್ನು ಪರಿಷ್ಕರಿಸಿತ್ತು.ಆದರೆ, ಆಟೋ ರಿಕ್ಷಾ ಚಾಲಕರ ಕಮ್ ಮಾಲೀಕರ ಸಂಘವು ಹೆಚ್ಚುವರಿ ಕಿಲೋಮೀಟರ್ ದರ 17 ರೂ.ಗೆ ಒಪ್ಪಿಗೆ ನೀಡಲಿಲ್ಲ. ಆದ್ದರಿಂದ ಹೆಚ್ಚುವರಿ ಕಿಲೋಮೀಟರ್ ದರವನ್ನು 20 ರೂ.ಗೆ ಪರಿಷ್ಕರಿಸಲಾಗಿದೆ.

ಪ್ರತೀ ರಿಕ್ಷಾದಲ್ಲೂ ದರದ ಪಟ್ಟಿಯನ್ನು ಅಳವಡಿಸಬೇಕು. ಪ್ರಯಾಣಿಕರು ಸೂಚಿಸಿದ ಸ್ಥಳಕ್ಕೆ ಹೋಗಲು ಚಾಲಕರು ನಿರಾಕರಿಸಿದಲ್ಲಿ, ಸಾರ್ವಜನಿಕರಲ್ಲಿ ಅನುಚಿತವಾಗಿ ವರ್ತಿಸಿದಲ್ಲಿ ಪೊಲೀಸ್ ಇಲಾಖೆಯು ಕ್ರಮ ಜರಗಿಸಬೇಕು. ಪ್ರಯಾಣಿಕರಿಂದ ಅಧಿಕ ದರ ವಸೂಲಿ ಮಾಡಿದರೆ ದೂ.ಸಂ: 0824-2220577/08251-230729/08255-280504ಕ್ಕೆ ದೂರು ನೀಡಬಹುದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

- Advertisement -

Related news

error: Content is protected !!