- Advertisement -
- Advertisement -
ವಿಟ್ಲ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರೆವೇರಿಸಿದ್ದು ಈ ಐತಿಹಾಸಿಕ ಕಾರ್ಯಕ್ರಮ ಯಶಸ್ವಿಯಾಗಲಿ ಮತ್ತು ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲೆಂದು ಕರೋಪಾಡಿ ಗ್ರಾಮದ, ಗ್ರಾಮ ದೈವಸ್ಥಾನವಾದ ಮಿತ್ತನಡ್ಕ ಶ್ರೀ ಮಲರಾಯಿ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ,ದೈವಸ್ಥಾನದ ಪರಿಸರದಲ್ಲಿ ಅಶೋಕ ಪುಷ್ಪದ ಗಿಡ ನೆಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮಲರಾಯಿ ದೈವಪಾತ್ರಿ ಕುಂಞ್ಞಣ್ಣ ಶೆಟ್ಟಿ ದೇವಸ್ಯ.. ಗ್ರಾಮದ ಕೋಮರಾಯ ದೈವಪಾತ್ರಿ ಕುಂಞ್ಞಣ್ಣ ಮಿತ್ತನಡ್ಕ.. ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು.. ಕರೋಪಾಡಿ ವ್ಯವಸಾಯಿಕ ಸಹಕಾರ ಸಂಘದ ಮಿತ್ತನಡ್ಕ ಉಪಾಧ್ಯಕ್ಷರಾದ ರಘುನಾಥ್ ಶೆಟ್ಟಿ ಪಟ್ಲಗುತ್ತು, ರವಿ ಒಡಿಯೂರು, ಹರೀಶ್ ಬೇಡಗುಡ್ಡೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
- Advertisement -