Sunday, April 28, 2024
spot_imgspot_img
spot_imgspot_img

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ತಲುಪಿದ ದೇಶದ ಅತೀ ದೊಡ್ಡ ಘಂಟೆ

- Advertisement -G L Acharya panikkar
- Advertisement -

ರಾಮಜನ್ಮಭೂಮಿಯಲ್ಲಿ ರಾಮಮಂದಿರ ಉದ್ಘಾಟನೆಗೆ ದೇಶದ ಅತೀ ದೊಡ್ಡ ಘಂಟೆಯೂ ಅಯೋಧ್ಯೆ ತಲುಪಿದೆ.

2,400 ಕೆ.ಜಿ ತೂಕದ ಬೃಹತ್ ಘಂಟೆ ಎಟಾಹ್ ಜಿಲ್ಲೆಯ ಜಲೇಸರ್ ಪಟ್ಟಣದಿಂದ ಈಗಾಗಲೇ ಅಯೋಧ್ಯೆ ತಲುಪಿದೆ. ಜಿಲ್ಲೆಯ ಉಪವಿಭಾಗಗಳಲ್ಲಿ ವಾಹನದ ಮೇಲೆ ಈ ಬೃಹತ್‌ ಘಂಟೆಯನ್ನು ಪ್ರದರ್ಶಿಸಿದ ನಂತರ ರೈಲಿನ ಮೂಲಕ ಸಾಗಿಸಲಾಗಿದ್ದು, ಮಂಗಳವಾರ ಅಯೋಧ್ಯೆಗೆ ತಲುಪಿದೆ.

ಸುಮಾರು 30 ಕಾರ್ಮಿಕರ ತಂಡದಿಂದ ಈ ಘಂಟೆ ತಯಾರಾಗಿದೆ. ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ತವರ, ಕಬ್ಬಿಣ ಮತ್ತು ಪಾದರಸ ಹೀಗೆ ಒಟ್ಟು 8 ಲೋಹಗಳಿಂದ ತಯಾರಿಸಲಾಗಿದೆ. ಘಂಟೆಯ ಅಗಲ 15 ಅಡಿ ಮತ್ತು ಒಳಭಾಗದ ಅಗಲ 5 ಅಡಿ ಇದ್ದು, ಇದನ್ನು ತಯಾರಿಸಲು ಒಂದು ವರ್ಷ ಬೇಕಾಗಿದೆ.

ಲೋಹದ ಉದ್ಯಮಿ ಆದಿತ್ಯ ಮಿತ್ತಲ್ ಮಾತನಾಡಿ, ಸಹೋದರನಾಗಿದ್ದ ಜಲೇಸರ್ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿಕಾಸ್ ಮಿತ್ತಲ್ ಅವರು ಈಗ ನಮ್ಮೊಂದಿಗಿಲ್ಲ. ಅವರು ದೇವಾಲಯಕ್ಕೆ ಘಂಟೆಯನ್ನು ಕೊಡುಗೆಯಾಗಿ ನೀಡಲು ಬಯಸಿದ್ದರು. ಅದರಂತೆ ನಮ್ಮಿಂದ ಈ ಕೊಡುಗೆಯನ್ನು ಅಯೋಧ್ಯೆಗೆ ನೀಡಲಾಗಿದೆ ಎಂದರು.

- Advertisement -

Related news

error: Content is protected !!