Wednesday, April 24, 2024
spot_imgspot_img
spot_imgspot_img

“ಆಯುರ್ವೇದದಲ್ಲಿ ಅಡ್ಡಪರಿಣಾಮಗಳೇ ಇಲ್ಲವೇ ?” ಇಲ್ಲಿದೆ ಉತ್ತರ

- Advertisement -G L Acharya panikkar
- Advertisement -
  • ಆದರ್ಶ ಪರಕ್ಕಜೆ
    ಆಯುರ್ವೇದ ವಿದ್ಯಾರ್ಥಿ

ತಪ್ಪು ಕಲ್ಪನೆ: ಆಯುರ್ವೇದದಲ್ಲಿ ಅಡ್ಡಪರಿಣಾಮಗಳಿಲ್ಲ!!

ನಿಜಾಂಶ : ಆಯುರ್ವೇದದಲ್ಲಿಯೂ ಸಹ ಕೆಲವೊಮ್ಮೆ ಅಡ್ಡಪರಿಣಾಮಗಳ ಆಗುವ ಸಾಧ್ಯತೆಗಳಿವೆ. ಅದು ಹೇಗೆ ಎಂದು ತಿಳಿದುಕೊಳ್ಳೋಣ..

❇️ ಆಯುರ್ವೇದ ಔಷಧಿಯನ್ನು ಸರಿಯಾದ ರೀತಿಯಲ್ಲಿ , ಸರಿಯಾದ ಪ್ರಮಾಣದಲ್ಲಿ,ಸರಿಯಾದ ರೂಪದಲ್ಲಿ ,ಸರಿಯಾದ ಅನುಪಾನದೊಂದಿಗೆ ಬಳಸದಿದ್ದರೆ ಅಡ್ಡಪರಿಣಾಮಗಳು ಆಗುವ ಸಾಧ್ಯತೆಗಳಿವೆ.
❇️ ಕೆಲವೊಮ್ಮೆ ರೋಗ ಹಾಗೂ ರೋಗಿಗೆ ಅನುಗುಣವಾಗಿ ಔಷಧಿಯನ್ನು ನೀರಿನಲ್ಲಿ/ಹಾಲಿನಲ್ಲಿ/ತುಪ್ಪ/ಜೇನುತುಪ್ಪ ಇತ್ಯಾದಿ ಯೊಂದಿಗೆ ಸೇವಿಸಬೇಕಾಗುತ್ತದೆ.
❇️ ಆಯುರ್ವೇದದಲ್ಲಿ ಒಂದೇ ರೋಗದಲ್ಲಿ ಎಲ್ಲಾ ವ್ಯಕ್ತಿಗಳಿಗೆ ಒಂದೇ ಔಷಧಿಯೂ ಹಿಡಿಸಬೇಕೆಂದಿಲ್ಲ. ಕೆಲವೊಂದು ಬಾರಿ ಒಂದೇ ಔಷಧಿಯನ್ನು ನೀಡಿದರೂ ಆಗ ಅದರ ಪ್ರಮಾಣ, ಅನುಪಾನ, ಹಾಗೂ ಬಳಸುವ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.
❇️ ರೋಗಪರೀಕ್ಷೆ ಹಾಗು ರೋಗಿ ಪರೀಕ್ಷೆ ನಡೆಸಿದ ನಂತರ ಅವರ ದೇಹಕ್ಕೆ ಹಾಗೂ ರೋಗದ ಅವಸ್ಥೆ ಯನ್ನು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತದೆ. ಒಂದೇ ರೋಗದಲ್ಲಿ ಎರಡು ವ್ಯಕ್ತಿಗಳಿಗೆ ಒಂದೇ ವಿಧದ ಔಷಧಿಯನ್ನು ಆಯುರ್ವೇದದಲ್ಲಿ ನೀಡುವುದಿಲ್ಲ.


? ನಮ್ಮ ದೇಹಕ್ಕೆ ಅಗತ್ಯವಿಲ್ಲದ ಅಂಶಗಳು ಹಾಗು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಯಾವುದಾದರೂ ಅಂಶಗಳು ದೇಹ ಸೇರಿದಾಗ , ಶರೀರದಲ್ಲಿರುವ ವಾತ-ಪಿತ್ತ-ಕಫಗಳಲ್ಲಿ ಅಸಮತೋಲನ ಉಂಟಾಗುತ್ತದೆ.
? ಇದೇ ಕಾರಣದಿಂದಾಗಿ ಕೆಲವರಿಗೆ ಕೆಲವೊಮ್ಮೆ ಮನೆಮದ್ದನ್ನು ಸೇವಿಸಿದಾಗ ದೇಹದಲ್ಲಿ ಉಷ್ಣ ಹೆಚ್ಚಾಗುವುದು. ಇನ್ನೂ ಕೆಲವರಿಗೆ ಶೀತ ಜಾಸ್ತಿಯಾಗುವುದು.
? ಮನೆಮದ್ದುಗಳನ್ನು ಸಹ ಆಯುರ್ವೇದ ವೈದ್ಯರ ಸಲಹೆ ಮೇರೆಗೆ ಅಷ್ಟೇ ಬಳಸಬೇಕು. ಇಲ್ಲವಾದಲ್ಲಿ ಕೆಲವೊಂದು ಬಾರಿ ಅಡ್ಡಪರಿಣಾಮಗಳಾಗುವ ಸಾಧ್ಯತೆಗಳಿವೆ.


? ಆದ್ದರಿಂದ ಯಾರೂ ಸಹ ಮನೆಯಲ್ಲಿ ನಿಮ್ಮಷ್ಟಕ್ಕೆ ನೀವೇ ಔಷಧಿ ಸೇವಿಸಬೇಡಿ.
ಕೆಲವೊಂದು ಬಾರಿ ಗುಣವಾಗಬಹುದು,ಗುಣವಾಗದೆಯೂ ಇರಬಹುದು.ಅಡ್ಡಪರಿಣಾಮಗಳೂ ಆಗಬಹುದು.
? ಆಯುರ್ವೇದ ಪದ್ಧತಿಯನ್ನು ಹೇಗೆ ಪಾಲಿಸಬೇಕೋ ಹಾಗೆಯೇ ಪಾಲಿಸಬೇಕು.ನಾವು ತಪ್ಪು ವಿಧಾನವನ್ನು ಅನುಸರಿಸಿ ಹೆಚ್ಚು ಕಡಿಮೆ ಆದರೆ, ನಂತರ ಆಯುರ್ವೇದವನ್ನು ದೂಷಿಸುವುದು ಸರಿಯಲ್ಲ.
? ನಿಮ್ಮ ಆಯುರ್ವೇದ ವೈದ್ಯರ ಮಾರ್ಗದರ್ಶನದಂತೆ ಔಷಧಿಗಳನ್ನು ಹಾಗೂ ಮನೆಮದ್ದುಗಳನ್ನು ಉಪಯೋಗ ಮಾಡಿ.


? ಟಿವಿ ಪೇಪರ್ ನಲ್ಲಿ ಬಂದಿದೆಯೆಂದು ಕಣ್ಣು ಮುಚ್ಚಿ ಮನೆಮದ್ದುಗಳನ್ನು ಪ್ರಯೋಗಿಸಬೇಡಿ. ಅದನ್ನು ಬಳಸಲು ಒಂದು ವಿಧಾನವಿರುತ್ತದೆ. ಅದನ್ನು ನಿಮ್ಮ ವೈದ್ಯರಷ್ಟೇ ನಿಮಗೆ ತಿಳಿಸಬಲ್ಲರು. ಏಕೆಂದರೆ ನಿಮ್ಮ ವೈದ್ಯರಿಗೆ ನಿಮ್ಮ ದೇಹಕ್ಕೆ ಏನು ಬೇಕು? ಏನು ಬೇಡ ? ಎಂಬ ಅರಿವಿರುತ್ತದೆ ಆದ್ದರಿಂದ ಅವರು ಮಾತ್ರವೇ ನಿಮಗೆ ಸೂಕ್ತ ಮಾರ್ಗದರ್ಶನ ನೀಡಬಲ್ಲರು.ಕೆಲವೊಂದು ಬಾರಿ ಕೆಲವು ಮದ್ದುಗಳು ನಿಮ್ಮ ದೇಹಕ್ಕೆ ಅಗತ್ಯವಿರುವುದಿಲ್ಲ ಆದರೂ ನೀವು ಅದನ್ನು ಸೇವಿಸುತ್ತೀರಿ. ಇಂತಹ ಸೂಕ್ಷ್ಮ ವಿಷಯಗಳನ್ನು ನಿಮ್ಮ ವೈದ್ಯರಷ್ಟೇ ನಿಮಗೆ ಹೇಳಬಲ್ಲರು. ಆದ್ದರಿಂದ ದಯಮಾಡಿ ಆರೋಗ್ಯಕ್ಕೆ ಒಳ್ಳೆಯದು ಎಂದು ಅತಿಯಾಗಿ ಯಾವುದನ್ನೂ ಬಳಸಬೇಡಿ. ಅತಿಯಾದರೆ ಅಮೃತವೂ ವಿಷ ಎಂಬುದು ನೆನಪಿನಲ್ಲಿಡಿ. ಹೆಚ್ಚು ತಿಂದರೆ ನಾವು ತಿನ್ನುವ ಆಹಾರವು ಕೂಡ ಅಜೀರ್ಣವಾಗುತ್ತದೆ. ಹಾಗಾಗಿ ಎಲ್ಲವೂ ಹಿತಮಿತವಾಗಿರಬೇಕು.

  • ಆದರ್ಶ ಪರಕ್ಕಜೆ
    ಆಯುರ್ವೇದ ವಿದ್ಯಾರ್ಥಿ

- Advertisement -

Related news

error: Content is protected !!