Sunday, July 19, 2026
spot_imgspot_img
spot_imgspot_img

ಬಾರಾಡಿ ಬೀಡು ಸೂರ್ಯ-ಚಂದ್ರ ಜೋಡುಕೆರೆ ಕಂಬಳ-ನೇಗಿಲು ದೊಡ್ಡ ವಿಭಾಗದಲ್ಲಿ ಮಾಣಿ ಸಾಗು ನಾಗರಾಜ ಶೆಟ್ಟಿಯವರ ಕೋಣಗಳು ಪ್ರಥಮ

- Advertisement -
- Advertisement -

39ನೇ ವರ್ಷದ ಬಾರಾಡಿಬೀಡು “ಸೂರ್ಯ – ಚಂದ್ರ” ಜೋಡುಕರೆ ಕಂಬಳ ಕೂಟದ ಫಲಿತಾoಶ ಪ್ರಕಟಗೊಂಡಿದ್ದು, ಇದರಲ್ಲಿ ಮಾಣಿ ಸಾಗು ನಾಗರಾಜ ಶೆಟ್ಟಿ ಮಾಲಕತ್ವದ ಮಾಣಿ ಹರೀಶ್‌ ಶೆಟ್ಟಿ ಅವರ “ಎ” ಕೋಣಗಳು ಪ್ರಥಮ ಸ್ಥಾನ ಪಡೆದಿದೆ. ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ ಗುಂಡು ಮತ್ತು ಶಬರಿ ಎಂಬ ಕೋಣಗಳನ್ನು 11 ನಿಮಿಷ 49 ಸೆಕುಂಡುಗಳಲ್ಲಿ ಓಡಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಕಟೀಲು ಕೊಡೆತ್ತೂರು ಕಿನ್ನಚ್ಚಿಲ್ ಲತಾ ಪ್ರಸಾದ್ ಶೆಟ್ಟಿಯವರ “ಬಿ” ಕೋಣಗಳು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಪಡು ಸಾಂತೂರು ಸುಕೇಶ್ ಪೂಜಾರಿ ಅವರು ತಮ್ಮ ಕೋಣಗಳನ್ನು 12 ನಿಮಿಷ 12 ಸೆಕುಂಡುಗಳಲ್ಲಿ ಓಡಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಒಟ್ಟು ಕಂಬಳಕೂಟದಲ್ಲಿ 171 ಜೊತೆ ಕೋಣಗಳು ಭಾಗಿಯಾಗಿದ್ದು, ನೇಗಿಲು ಹಿರಿಯ ವಿಭಾಗದಲ್ಲಿ 32 ಜೊತೆ ಕೋಣಗಳು ಭಾಗಿಯಾಗಿದ್ದವು.

ಮಾಣಿ ನಾಗರಾಜ ಶೆಟ್ಟಿ ಅವರ ಕೋಣಗಳು ಅನೇಕ ಕಂಬಳಕೂಟದಲ್ಲಿ ಭಾಗವಹಿಸಿದ್ದು ಸೆಮಿ ಫೈನಲ್‌ ವರೆಗೂ ಬಂದಿತ್ತು. ಇದೀಗ ಪ್ರಥಮ ಸ್ಥಾನ ಪಡೆದುಕೊಂಡಿರುವ ಬಗ್ಗೆ ವಿಟಿವಿಗೆ ಪ್ರತಿಕ್ರಿಯಿಸಿ ಸಂತಸ ವ್ಯಕ್ತಪಡಿಸಿದ್ದಾರೆ.


- Advertisement -

Related news

error: Content is protected !!