Saturday, April 20, 2024
spot_imgspot_img
spot_imgspot_img

ಬಾನಂಗಳದಲ್ಲಿ ಮಗುವಿಗೆ ಜನನ!!

- Advertisement -G L Acharya panikkar
- Advertisement -

ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ತಾಯಿಯೊಬ್ಬರು ಮಾರ್ಗ ಮಧ್ಯೆಯೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ದೆಹಲಿಯಿಂದ ಬೆಂಗಳೂರಿಗೆ ಬರಲು ಫಿಟ್ ಏರ್ ಸರ್ಟಿಫಿಕೇಟ್ ಪಡೆದು ಫ್ಲೈಟ್ ಹತ್ತಿದ್ದ ಗರ್ಭಿಣಿ ಮಹಿಳೆಗೆ ಮಾರ್ಗ ಮಧ್ಯೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಫ್ಲೈಟ್​ನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯೆ ಡಾ.ಶೈಲಜಾ ವಲ್ಲಬಾನಿ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ತಾಯಿ ಮಗುವಿಗೆ ಏರ್​ಪೋರ್ಟ್​ ಸಿಬ್ಬಂದಿ ಸ್ವಾಗತ ಕೋರಿದ್ದಾರೆ. ಬೆಂಗಳೂರಿನ ಎ ಸ್ಟಾರ್ ಆಸ್ಪತ್ರೆಗೆ ಆಂಬ್ಯುಲೆನ್ಸ್​ನಲ್ಲಿ ತಾಯಿ ಮಗುವನ್ನು ಕಳುಹಿಸಲಾಗಿದೆ. ತಾಯಿ-ಮಗು ಆರೋಗ್ಯ ವಾಗಿದ್ದು, ತಾಯಿ ಮಗು ಇಬ್ಬರಿಗೂ ಇಂಡಿಗೋ ಏರ್​ ಲೈನ್ಸ್​ನಲ್ಲಿ ಜೀವನ ಪರ್ಯಂತ ಉಚಿತ ಪ್ರಯಾಣ ಘೋಷಣೆ ಮಾಡಲಾಗಿದೆ.

- Advertisement -

Related news

error: Content is protected !!