Wednesday, June 17, 2026
spot_imgspot_img
spot_imgspot_img

ಬೈಕಂಪಾಡಿ: ಅರೋಮಾಝೆನ್ ಪ್ರೈ. ಲಿಮಿಟೆಡ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ; ಅಪಾರ ನಷ್ಟ

- Advertisement -
- Advertisement -

ಬೈಕಂಪಾಡಿ: ಅರೋಮಾಝೆನ್ ಪ್ರೈ. ಲಿಮಿಟೆಡ್ ಫ್ಯಾಕ್ಟರಿಯಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿ‌ಕೊಂಡಿದ್ದು, ಇದನ್ನು ಗಮನಿಸಿದ ಎಂ.ಸಿ.ಎಫ್ ಸಂಸ್ಥೆಯ ಸಿಬ್ಬಂದಿಗಳು ಅಗ್ನಿಶಾಮಕ ದಳದವರಿಗೆ ಕರೆ ಮಾಡಿದ್ದು ನಂತರ ಅಲ್ಲಿಗೆ ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗು ಅಧಿಕಾರಿಗಳ ಸಹಾಯದಿಂದ ಬೆಂಕಿಯನ್ನು ನಂದಿಸಲಾಯಿತು.

ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ‌ನಿಂದಾಗಿ ಅನಾಹುತ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು. ಇನ್ನು ಇದರ ಸಂಪೂರ್ಣ ತನಿಖೆ ನಡೆಯಬೇಕಾಗಿದೆ. ಸೋಪ್ ಹಾಗೂ ಪರ್ಫ್ಯೂಮ್ ಗೆ ಉಪಯೋಗಿಸುವ ಲಿಕ್ವೀಡ್ ತಯಾರಿಸುವ ಫ್ಯಾಕ್ಟರಿ ಇದಾಗಿತ್ತು. ಬೆಂಕಿ‌ ಆಹುತಿಯಿಂದ ಸರಿ ಸುಮಾರು 4 ಕೋಟಿ ನಷ್ಟ ಆಗಿರಬಹುದೆಂದಹ ಅಂದಾಜಿಸಲಾಗಿದೆ. ಮಂಗಳೂರಿನ ಬೈಕಂಪಾಡಿ‌ ಇಂಡಸ್ಟ್ರಿಯಲ್ ಪ್ರದೇಶದಲ್ಲಿರುವ ಫ್ಯಾಕ್ಟರಿ ಇದಾಗಿದೆ.

- Advertisement -

Related news

error: Content is protected !!