Saturday, July 25, 2026
spot_imgspot_img
spot_imgspot_img

ಉಡುಪಿ: ಸಮುದ್ರದಲ್ಲಿ ಮುಳುಗಿ ಯುವಕ ದಾರುಣ ಸಾವು

- Advertisement -
- Advertisement -

ಬೈಂದೂರು: ಸ್ನೇಹಿತರ ಜೊತೆ ಸಮುದ್ರಕ್ಕೆ ಗಾಳಕ್ಕಾಗಿ ತೆರಳಿದ ವೇಳೆ ಯುವಕ ನೀರುಪಾಲಾಗಿ ಅಸುನೀಗಿದ ಘಟನೆ ಕುಂದಾಪುರದ ಸೋಮೇಶ್ವರದ ಬಳಿ ನಡೆದಿದೆ. ಬೈಂದೂರು ಬಿಜೂರು ಸಮೀಪದ ಬವಳಾಡಿ ನಿವಾಸಿ ಮಂಜುನಾಥ ದೇವಾಡಿಗ ಎಂಬುವವರ ಪುತ್ರ ಶಶಿಧರ್ ದೇವಾಡಿಗ (22) ಮೃತ ದುರ್ದೈವಿ.

ತನ್ನ ನಾಲ್ವರು ಸ್ನೇಹಿತರೊಂದಿಗೆ ಶೆಶಿಧರ್ ಮೀನು ಹಿಡಿಯಲು ಗಾಳಕ್ಕಾಗಿ ತೆರಳಿದ್ದರು. ಈ ಸಂದರ್ಭದಲ್ಲಿ ಅಲೆಗಳ ರಭಸಕ್ಕೆ ನಿಯಂತ್ರಣ ಕಳೆದುಕೊಂಡು ತೆರೆಯೊಂದಿಗೆ ತೆಲೆಹೋಗಿದ್ದಾರೆ. ತನ್ನ ಸ್ನೇಹಿತ ಹಾಗೂ ಮೀನುಗಾರರು ರಕ್ಷಣೆಗೆ ಮುಂದಾದರೂ ಕೂಡ ಶಶಿಧರ್ ಅವರನ್ನು ಬಚಾವ್ ಮಾಡಲು ಸಾಧ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಬೈಂದೂರು ಸಿಪಿಐ ಸಂತೋಷ್ ಕಾಯ್ಕಿಣಿ ಹಾಗೂ ಠಾಣೆಯವರು ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!