- Advertisement -
- Advertisement -


ಬೈಂದೂರು: ಹೊಳೆ ದಡದಲ್ಲಿ ಆಡುತ್ತಿದ್ದ ಬಾಲಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಸೆ.26ರಂದು ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಬಾಲಕನನ್ನು ಶಿರೂರು ಗ್ರಾಮದ ಅಳ್ವೆಗದ್ದೆ ಕೇಸರಕೋಡಿಯ ವೆಂಕಟೇಶ ಮೇಸ್ತ ಅವರ ಪುತ್ರ ಪನ್ನಗ (12) ಎನ್ನಲಾಗಿದೆ.
ಇದನ್ನೂ ಓದಿ: ವಿಟ್ಲ: ಕೇಸರಿ ಶಾಲು ಧರಿಸಿದರೆ ಹುಷಾರ್; ಅಡ್ಯನಡ್ಕದಲ್ಲಿ ಯುವಕನಿಗೆ ಹಲ್ಲೆ ನಡೆಸಿದ ಅನ್ಯಕೋಮಿನ ಯುವಕರು
ಬಾಲಕ ಪನ್ನಗ ಪಕ್ಕದ ಮನೆಯ ರಾಜೇಶನೊಂದಿಗೆ ಶಿರೂರು ಗ್ರಾಮದ ಕಿರುಹೊಳೆ ಕುಸಿನಗದ್ದೆ ಹೊಳೆಯ ದಡದಲ್ಲಿ ಆಟವಾಡುತಿದ್ದರು. ಈ ವೇಳೆ ಕಾಲು ಜಾರಿ ಹೊಳೆಗೆ ಬಿದ್ದ ಪನ್ನಗ, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ಘಟನೆ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -








