Monday, May 6, 2024
spot_imgspot_img
spot_imgspot_img

ಮಾಣಿ :ಪೆರಾಜೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನ ಕ್ಯಾಂಪಸ್ ನ ಉದ್ಘಾಟನಾ ಸಮಾರಂಭ ಮತ್ತು ವಾರ್ಷಿಕೋತ್ಸವ ‘ವಿಕಾಸ ವೈಭವ 2023’

- Advertisement -G L Acharya panikkar
- Advertisement -

ಮಾಣಿ: ಬಹಳಷ್ಟು ಕುಶಿ ಹಾಗೂ ಸಂತೋಷದ ದಿನ. ಈ ಗ್ರಾಮೀಣ ಭಾಗದಲ್ಲಿ ಇಷ್ಟೊಂದು ಉತ್ತಮ ವ್ಯವಸ್ಥೆಯನ್ನು ಹೊಂದಿರುವ ಸುಂದರ ಶಾಲೆಯನ್ನು ಹುಟ್ಟುಹಾಕಿರುವುದು ಸಂತಸದ ಸಂಗತಿ. ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಒಂದಾಗಿ ಮೂಡಿಬರಲಿ. ಇಲ್ಲಿ ಕಲಿತ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನವಾಗಲಿ. ಅದರ ಜೊತೆಗೆ ರಾಷ್ಟ್ರದ ಪುನರ್ ನಿರ್ಮಾಣವಾಗಲಿ ಎಂದು ಮಂಗಳೂರಿನ ಶಕ್ತಿ ಶಿಕ್ಷಣ ಸಂಸ್ಥೆಯ ಮುಖ್ಯ ಸಲಹೆಗಾರ ರಮೇಶ ಕೆ.ರವರು ಹೇಳಿದರು.

ಅವರು ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ನೂತನ ಕ್ಯಾಂಪಸ್ ನ ಉದ್ಘಾಟನಾ ಸಮಾರಂಭ ಮತ್ತು ಎರಡುದಿನಗಳ ಕಾಲ ನಡೆಯಲಿರುವ ವಾರ್ಷಿಕೋತ್ಸವ ‘ವಿಕಾಸ ವೈಭವ 2023’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲೆ ನಡೆಸುವುದು ಅಷ್ಟೊಂದು ಸುಲಭದ ಮಾತಲ್ಲ. ಶಾಲಾ ಸಂಚಾಲಕರಾಗಿರುವ ಪ್ರಹ್ಲಾದ್ ಶೆಟ್ಟಿರವರು ಬಹಳಷ್ಟು ಅನುಭವ ಹೊಂದಿರವವರು. ಹಲವಾರು ವರುಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನ ಸಮಾಜಕ್ಕೆ ಕೊಟ್ಟಿರುವ ವಿದ್ಯಾಸಂಸ್ಥೆ ಎನ್ನುವುದು ಹೆಮ್ಮೆಯ ವಿಚಾರ. ಶಾಲಾ ಸಂಚಾಲಕರ ಅನುಭವದ ಆಧಾರದಲ್ಲಿ ಸುಂದರ ಶಾಲೆಯ ಹುಟ್ಟಾಗಿದೆ. ಗ್ರಾಮೀಣ ಭಾಗದಲ್ಲಿ ಸುಸಜ್ಜಿತ ವ್ಯವಸ್ಥೆಯನ್ನು ಹೊಂದಿರುವ ಶಾಲೆ ನಿರ್ಮಾಣ ಮಾಡುವಲ್ಲಿ ಮಹೇಶ್ ಶೆಟ್ಟಿಯವರ ಪ್ರಯತ್ನ ಅಪಾರವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ‌ಗೆ ತಕ್ಕುದಾದ ವ್ಯವಸ್ಥೆ ಈ ಶಿಕ್ಷಣ ಸಂಸ್ಥೆಯಲ್ಲಿದೆ. ದೊಡ್ಡ ಪೇಟೆ ಪಟ್ಟಣಗಳಲ್ಲಿರುವ ಶಾಲೆಗಳಲ್ಲಿರುವ ವ್ಯವಸ್ಥೆಗಿಂತಲು ಅಧಿಕ ವ್ಯವಸ್ಥೆ ಬಾಲವಿಕಾಸದ ನೂತನ ಕ್ಯಾಂಪಸ್ ನಲ್ಲಿದೆ. ಇಂತಹ ಶಿಕ್ಷಣ ಸಂಸ್ಥೆಯ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಬಾಲವಿಕಾಸ ಟ್ರಸ್ಟ್ ನ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ.ರವರು ಮಾತನಾಡಿ ಎಲ್ಲರ ಪ್ರಯತ್ನದ ಫಲವಾಗಿ ಇಷ್ಟೊಂದು ಸುಂದರ ಕ್ಯಾಂಪಸ್ ನಿರ್ಮಾಣವಾಗಿದೆ. ತಂದೆಯ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅವರ ಕನಸನ್ನು ನನಸು ಮಾಡಬೇಕೆನ್ನುವ ಇರಾದೆಯಿಂದ ನಾನು ಈ ಕೆಲಸಕ್ಕೆ ಕೈಹಾಕಿದ್ದೇನೆ. ಟ್ರಸ್ಟ್ ನವರು ನನ್ನ ಮೇಲಿಟ್ಟಿರುವ ನಂಬಿಕೆಗೆ ನಾನು ಚಿರರುಣಿಯಾಗಿದ್ದೇನೆ. ಎಲ್ಲರ ನಂಬಿಕೆ ಯಶಸ್ವಿಯಾಗಿ ಪೂರೈಸಿದ್ದೇನೆ ಎನ್ನುವ ಖುಶಿ ನನಗಿದೆ. ಎಲ್ಲರ ಸಲಹೆ ಸಹಕಾರ ಪ್ರೋತ್ಸಾಹದಿಂದ ಈ ಒಂದು ಸುಂದರ ವಿದ್ಯಾಸಂಸ್ಥೆಯನ್ನು ಹುಟ್ಟುಹಾಕಲು ಸಾಧ್ಯವಾಗಿದೆ. ಶಾಲೆಯ ಒಳ್ಳೆಯತನವನ್ನು ಎಲ್ಲರಲ್ಲಿ ಹೇಳಿಕೊಂಡು ಶಾಲೆಯ ಯಶಸ್ಸಿಗೆ ಸಹಕಾರ ನೀಡಿ. ಸಂಸ್ಥೆಯ ಬೆಳವಣಿಗೆಗ ಎಲ್ಲರೂ ಕೈಜೋಡಿಸಿ ಎಂದರು.

ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಖ್ಯಾತಿಯ ಧ್ವನಿ ಕಲಾವಿದ, ನಟ, ನಿರೂಪಕ ಬಡಕ್ಕಿಲ ಪ್ರದೀಪ್ ರವರ ಪರವಾಗಿ ಅವರ ಹೆತ್ತವರಾದ ಪದ್ಮಾವತಿ‌ ಹಾಗೂ ಚಂದ್ರಶೇಖರ ಭಟ್ ಬಡೆಕ್ಕಿಲರವರಿಗೆ ‘ಬಾಲವಿಕಾಸ ರತ್ನ ಅವಾರ್ಡ್ ೨೦೨೩’ ನೀಡಿ ಸನ್ಮಾನಿಸಲಾಯಿತು.

ಯಮುನಾ ಹೋಮ್ಸ್ ಡಿಸೆನ್ಸ್ ವ್ಯವಸ್ಥಾಪಕ ಮತ್ತು ನಿರ್ದೇಶಕ ನುಳಿಯಾಲು ಪುರುಷೋತ್ತಮ ಆರ್. ಶೆಟ್ಟಿ, ದಂಪತಿಗಳನ್ನು, ಬೆಂಗಳೂರಿನ ವಾಸ್ತುಶಿಲ್ಪಿ ಸೂರಾಜ್ ಅಂಚನ್ , ಎಸ್‌ಎಸ್ ಇಂಜಿನಿಯರಿಂಗ್ ಮತ್ತು ಸಲಹೆಗಾರ ಸಂತೋಷ್ ಶೆಟ್ಟಿ, ಕಾನೂನು ಸಲಹೆಗಾರ ಪ್ರವೀಣ್ ಚಂದ್ರ ಶೆಟ್ಟಿ, ಸಚ್ಚಿದಾನಂದ ರೈ ಪಾಳ್ಯ ಹಾಗೂ ಮದನಾಕ್ಷಿ ದಂಪತಿಗಳನ್ನು, ಪ್ರತಾಪ್ ಶೆಟ್ಟಿ ಮಾಣಿಬೆಟ್ಟು ಹಾಗೂ ಅನುಶ್ರೀ ಜೆ.ರೈ ದಂಪತಿಗಳನ್ನು, ಬಾಲವಿಕಾಸ ಟ್ರಸ್ಟ್ ನ ಸಂಚಾಲಕರಾದ ಪ್ರಹ್ಲಾದ್ ಶೆಟ್ಟಿ ಜೆ. ಹಾಗೂ ಪತ್ನಿ ಸುಜಯಾ ಪಿ.ಶೆಟ್ಟಿ, ಟ್ರಸ್ಟ್ ನ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ. ಹಾಗೂ ಪತ್ನಿ ನಮೃತಾ ರೈ, ಬಾಲವಿಕಾಸ ಟ್ರಸ್ಟ್ ನ ಉಪಾಧ್ಯಕ್ಷರಾದ ಯತಿರಾಜ್ ಕೆ.ಎಲ್. ಹಾಗೂ ಬಬಿತಾ ಶೆಟ್ಟಿ ದಂಪತಿ, ಟ್ರಸ್ಟ್ ನ ಸದಸ್ಯರಾದ ಶುಭಾಶಿನಿ ಎ.‌ಶೆಟ್ಟಿ, ಜಯಲಕ್ಷ್ಮೀ ಪೈ,ರವರನ್ನು ಗೌರವಿಸಲಾಯಿತು.

ಮಾಣಿ ಬಾಲವಿಕಾಸ ಟ್ರಸ್ಟ್ ಅಧ್ಯಕ್ಷ ಪ್ರಹ್ಲಾದ್ ಶೆಟ್ಟಿ ಜೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶಾಲ ಎಂ. ಪೆರಾಜೆ, ಯಮುನಾ ಹೋಮ್ಸ್ ಡಿಸೆನ್ಸ್ ವ್ಯವಸ್ಥಾಪಕ ಮತ್ತು ನಿರ್ದೇಶಕ ನುಳಿಯಾಲು ಪುರುಶೋತ್ತಮ ಆರ್. ಶೆಟ್ಟಿ, ಬೆಂಗಳೂರಿನ ವಾಸ್ತುಶಿಲ್ಪಿ ನಿರ್ದೇಶಕ ಸೂರಾಜ್ ಅಂಚನ್ , ಎಸ್‌ಎಸ್ ಇಂಜಿನಿಯರಿಂಗ್ ಮತ್ತು ಸಲಹೆಗಾರ ಸಂತೋಷ್ ಶೆಟ್ಟಿ, ಕಾನೂನು ಸಲಹೆಗಾರ ಪ್ರವೀಣ್ ಚಂದ್ರ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕಸ್ತೂರಿ ಪಿ. ಶೆಟ್ಟಿ, ಮಾಣಿ ಬಾಲವಿಕಾಸ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ., ಉಪಾಧ್ಯಕ್ಷ ಯತಿರಾಜ್ ಕೆ. ಎನ್., ಟ್ರಸ್ಟಿಗಳಾದ ಜಯಲಕ್ಷ್ಮಿ ಪೈ, ಸುಭಾಷಿಣಿ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಡಳಿತಾಧಿಕಾರಿ ರವೀಂದ್ರ ದರ್ಬೆ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ವಿ. ಶೆಟ್ಟಿ ವಂದಿಸಿದರು. ಶಿಕ್ಷಕರಾದ ಸುಪ್ರಿಯ ಡಿ., ಶೋಭಾ ಎಂ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!