Friday, June 5, 2026
spot_imgspot_img
spot_imgspot_img

ಭಂಡಾರಿಬೆಟ್ಟು: ಟಿಪ್ಪರ್ ಢಿಕ್ಕಿಯಾಗಿ ವಿದ್ಯುತ್ ಕಂಬಕ್ಕೆ ಹಾನಿ

- Advertisement -
- Advertisement -

ಬಂಟ್ವಾಳ: ಟಿಪ್ಪರ್ ಲಾರಿಯೊಂದು ಹಿಂತೆಗೆಯುವ ಭರದಲ್ಲಿ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ವಿದ್ಯುತ್ ಕಂಬ ಮುರಿದು ಬಿದ್ದ ಘಟನೆ ಶುಕ್ರವಾರ ರಾತ್ರಿ ಭಂಡಾರಿಬೆಟ್ಟುವಿನಲ್ಲಿ ಸಂಭವಿಸಿದೆ.


ಬಿ.ಸಿ.ರೋಡ್-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಂಡಾರಿಬೆಟ್ಟು ವಿನಲ್ಲಿ ವತ್ಸಿ ರೆಸಿಡೆನ್ಸಿ ಬಳಿ ಟಿಪ್ಪರ್ ಲಾರಿ ತಿರುಗಿಸಲೆಂದು ಹಿಂತೆಗೆಯಲು ಸಂಪರ್ಕ ರಸ್ತೆಗೆ ಇಳಿಸಿದ್ದು, ಮೇಲಕ್ಕೆ ಬರಲಾಗದೆ ಸ್ಕಿಡ್ ಆಗಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದ ವಿದ್ಯುತ್ ಕಂಬ ಮುರಿದಿದೆ. ಅದೃಷ್ಟವಶಾತ್ ಈ ಕಂಬಕ್ಕೆ ಇನ್ನೊಂದು ಕಂಬದ ಆಸರೆ ಇದ್ದುದರಿಂದ ವಿದ್ಯುತ್ ತಂತಿ ಲಾರಿ ಮೇಲೆ ಬೀಳುವುದು ತಪ್ಪಿ ಬಹುದೊಡ್ಡ ಅಪಾಯ ತಪ್ಪಿದೆ.


ಘಟನೆ ಸಂದರ್ಭದಲ್ಲಿ ಚಾಲಕ ಕುಡಿತದ ಮತ್ತಿನಲ್ಲಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ ಮೆಸ್ಕಾಂ ಇಲಾಖಾಕಾರಿಗಳು ಸ್ಥಳಕ್ಕಾಗಮಿಸಿ ವಿದ್ಯುತ್ ಕಂಬ ತೆರವಿಗೆ ವ್ಯವಸ್ಥೆ ನಡೆಸಿದ್ದಾರೆ.
ಹೆದ್ದಾರಿ ಕಾಮಗಾರಿಯಿಂದಾಗಿ ಒಳ ಸಂಪರ್ಕ ರಸ್ತೆಗಳು ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೊಡಕುಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

- Advertisement -

Related news

error: Content is protected !!