Saturday, June 6, 2026
spot_imgspot_img
spot_imgspot_img

ಲಾರಿಗೆ ಕಾರು ಡಿಕ್ಕಿ; 7 ಮಂದಿ ಮೃತ್ಯು

- Advertisement -
- Advertisement -

ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದಂತೆ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನರ ತಿರುವಣ್ಣಾಮಲೈನ ಚೆಂಗಂ ಪಟ್ಟಣದ ಪಕ್ಕಿರಿಪಾಳ್ಯಂ ಗ್ರಾಮದಲ್ಲಿ ನಡೆದಿದೆ. ಇನ್ನು ಗುರುತು ಪತ್ತೆಯಾಗದ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಆರ್.ಸತೀಶ್ ಕುಮಾರ್ (40), ಅವರ ಇಬ್ಬರು ಮಕ್ಕಳಾದ ಎಸ್.ಸರ್ವೇಶ್ವರನ್(6), ಮತ್ತು ಎಸ್.ಸಿಧು(3), ಎಸ್.ಮಣಿಕಂದನ್ (42)ಮತ್ತು ಎಸ್.ಹೇಮಂತ್(35) ಕೆ.ಶ್ರೀನಿವಾಸನ್ (60) ಮತ್ತು S. ಮಲಾರ್ (58) ಮೃತಪಟ್ಟವರು.

ತಿರುವಣ್ಣಾಮಲೈನಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಬೆಂಗಳೂರಿಗೆ ಹಿಂತಿರುಗುತ್ತಿದ್ದ ವೇಳೆ ಅವರ ಕಾರು ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತ ತೀವೃತೆಗೆ ಏಳು ಮಂದಿ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವೃತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

- Advertisement -

Related news

error: Content is protected !!