Saturday, April 27, 2024
spot_imgspot_img
spot_imgspot_img

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 4ನೇ ಬಾರಿ ಸೇವಾ ಗುಣಮಟ್ಟ ಪ್ರಶಸ್ತಿ

- Advertisement -G L Acharya panikkar
- Advertisement -

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದ್ದು, ಇದೀಗ 4ನೇ ಬಾರಿ ವಿಮಾನ ನಿಲ್ದಾಣ ಸೇವಾ ಗುಣಮಟ್ಟದ ವಾರ್ಷಿಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಏರ್ ಪೋರ್ಟ್ ಕೌನ್ಸಿಲ್ ಇಂಟರ್ ನ್ಯಾಷನಲ್ ನವರು ಈ ಪ್ರಶಸ್ತಿ ನೀಡಿದ್ದು, ವಿಮಾನ ನಿಲ್ದಾಣದ ಗಾತ್ರ ಹಾಗೂ ಪ್ರದೇಶವನ್ನು ಆಧರಸಿ ಪ್ರಶಸ್ತಿ ನೀಡಲಾಗಿದೆ. ಸತತ ನಾಲ್ಕನೇ ಬಾರಿ ಬೆಂಗಳೂರು ವಿಮಾನ ನಿಲ್ದಾಣ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಪ್ರತಿ ವರ್ಷ 2.5 ರಿಂದ 4 ಕೋಟಿ ಪ್ರಯಾಣಿಕರು ಪ್ರಯಾಣಿಸುವ ವಿಭಾಗದಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಬೆಂಗಳೂರು ವಿಮಾನ ನಿಲ್ದಾಣ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಅತ್ಯುತ್ತಮ ಸೇವೆಗಾಗಿ 2017, 2018 ಹಾಗೂ 2019ರಲ್ಲಿ ಅಸಿಐ-ಎಎಸ್‍ಕ್ಯೂ ಪ್ರಶಸ್ತಿಗಳನ್ನು ಪಡೆದಿದೆ. ವಿಮಾನ ನಿಲ್ದಾಣದಲ್ಲಿ ಸ್ವಚ್ಛತೆ ಹಾಗೂ ಕೊರೊನಾ ಸಂದರ್ಭದಲ್ಲಿ ಸ್ಯಾನಿಟೈಸ್ ಮಾಡುವ ಮೂಲಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಇಡೀ ವಿಶ್ವದಲ್ಲಿ ಅರೈವಲ್ಸ್ ಹಾಗೂ ಡಿಪಾರ್ಚರ್ಸ್ ಎರಡರಲ್ಲೂ ಎಎಸ್‍ಕ್ಯೂ ಪ್ರಶಸ್ತಿ ಪಡೆದ ಏಕೈಕ ವಿಮಾನ ನಿಲ್ದಾಣವಾಗಿದೆ. 2018 ಹಾಗೂ 2019ರಲ್ಲಿ ಈ ಪ್ರಶಸ್ತಿ ಲಭಿಸಿದೆ. ವಿಶ್ವ ಮಟ್ಟದಲ್ಲಿ ಈ ರೀತಿ ಗುರುತಿಸುತ್ತಿರುವುದು ನಿಜಕ್ಕೂ ನಮಗೆ ಹೆಮ್ಮೆಯ ಸಂಗತಿ. ಬೆಂಗಳೂರು ವಿಮಾನ ನಿಲ್ದಾಣದಲ್ಲಿನ ನಮ್ಮ ಇಕೋಸಿಸ್ಟಮ್ ಪಾರ್ಟ್ನರ್ಸ್ ಯಿಂದ ಇದೆಲ್ಲ ಸಾಧ್ಯವಾಗಿದೆ ಎಂದು ಬಿಐಎಎಲ್ ಎಂಡಿ ಹಾಗೂ ಸಿಇಒ ಹರಿ ಮಾರಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ನಮ್ಮ ಕೈಗಾರಿಕೆಗಳು ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿಯೂ ಈ ಪ್ರಶಸ್ತಿ ಸಿಕ್ಕಿರುವುದು ವಿಮಾನ ನಿಲ್ದಾಣದಲ್ಲಿನ ತಂಡದ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ. ನಮ್ಮ ಪ್ರಯಾಣಿಕರ ವಿಶ್ವಾಸ ಮತವು ನಮ್ಮ ಸೇವೆಯ ಶ್ರೇಷ್ಠತೆಯ ಸನ್ವೇಷಣೆಯಲ್ಲಿ ಮತ್ತಷ್ಟು ಪ್ರೇರಣೆ ನೀಡತ್ತದೆ. ನಮ್ಮ ಪ್ರಯಾಣಿಕರು, ಪಾರ್ಟ್ನರ್ಸ್ ಬೆಂಬಲಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!