Saturday, June 20, 2026
spot_imgspot_img
spot_imgspot_img

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ದಾಳಿ ಪ್ರಕರಣ-ಮಾಜಿ ಮೇಯರ್ ಸಂಪತ್ ರಾಜ್ ಬಂಧನಕ್ಕೆ ವಿಶೇಷ ತಂಡ ರಚನೆ

- Advertisement -
- Advertisement -

ಬೆಂಗಳೂರು(ನ.4): ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲಿನ ದಾಳಿ ಪ್ರಕರಣದ ಆರೋಪ ಎದುರಿಸುತ್ತಿರುವ ಮಾಜಿ ಮೇಯರ್ ಸಂಪತ್ ರಾಜ್ ಗಾಗಿ ಹುಡುಕಾಟ ಮುಂದುವರೆದಿದೆ.ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ಸಂಪತ್ ರಾಜ್ ನಾಪತ್ತೆಯಾಗಿರುವುದರಿಂದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಸಂಪತ್ ರಾಜ್ ಕಾಣೆಯಾದ ಬೆನ್ನಲ್ಲೇ ಸ್ನೇಹಿತರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಸಂಪತ್ ರಾಜ್ ಅವರ ಆಪ್ತ ಸ್ನೇಹಿತರಿಗೆ ವಿಚಾರಣೆಗೆ ಹಾಜರಾಗಲು ಸಿಸಿಬಿ ಬುಲಾವ್ ನೀಡಿತ್ತು ಈಗಾಗಲೇ ಆಸ್ಪತ್ರೆಯ ಸಿಬ್ಬಂದಿ, ಸ್ನೇಹಿತರು ಹಾಗೂ ಕುಟುಂಬಸ್ಥರನ್ನ ಒಂದು ಸುತ್ತಿನ ವಿಚಾರಣೆಗೆ ಒಳಪಡಿಸಲಾಗಿದೆ. ಸ್ನೇಹಿತರು, ಕುಟುಂಬಸ್ಥರ ವಿಚಾರಣೆ ನಡೆಸುವ ಸಾಧ್ಯತೆ ಇದೆ.


ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು. ಸಂಪತ್ ರಾಜ್ ಅವರನ್ನು ಪತ್ತೆ ಮಾಡಲು ಬೆಂಗಳೂರು ಸೇರಿದಂತೆ ಹೊರ ರಾಜ್ಯಕ್ಕೂ ಸಿಸಿಬಿಯ ಪ್ರತ್ಯೇಕ ತಂಡಗಳು ತೆರಳಿವೆ.

- Advertisement -

Related news

error: Content is protected !!