Thursday, May 2, 2024
spot_imgspot_img
spot_imgspot_img

ಸಾಮಾನ್ಯ ಜ್ವರವೆಂದು ನಿರ್ಲಕ್ಷಿಸಿ ಕೊರೋನಾಗೆ ಬಲಿಯಾದ ಯುವಕ!

- Advertisement -G L Acharya panikkar
- Advertisement -

ಬೆಂಗಳೂರು: ಕೊರೋನಾ ಮಹಾಮಾರಿ ಎಂಬುದು ಯಾವಾಗ, ಹೇಗೆ ಬರುತ್ತದೆ ಎಂಬುದೇ ತಿಳಿಯದಂತೆ ಆಗಿದೆ. ಈ ಹಿಂದೆ ಸೋಂಕಿಗೆ ವಯಸ್ಸಾದವರು ಬಲಿಯಾಗುವ ಸಾಧ್ಯತೆ ಹೆಚ್ಚಿತ್ತು ಎನ್ನಲಾಗಿತ್ತು. ಆದರೆ, ಕೊರೋನಾ ಎರಡನೇ ಅಲೆಯಲ್ಲಿ ಸೋಂಕು ತೀವ್ರತರವಾಗಿದ್ದು, ಮಧ್ಯಮ ವಯಸ್ಸಿನವರು ಬಲಿಯಾಗುತ್ತಿರುವುದು ಆತಂಕ ಮೂಡಿಸಿದೆ.

driving

ಸೋಂಕಿನ ಲಕ್ಷಣ ಕಂಡು ಬಾರದೇ ಅನೇಕರು ಕಡೆಗೆ ಉಸಿರಾಟ ಸಮಸ್ಯೆಗೆ ಒಳಗಾಗಿ ಜೀವ ಕಳೆದುಕೊಳ್ಳುತ್ತಿರುವ ಕರುಣಾಜನಕ ಸ್ಥಿತಿ ಎದುರಾಗುತ್ತಿದೆ. ಇದೇ ರೀತಿ ಕೊರೋನಾಗೆ 30 ವರ್ಷದ ಯುವಕ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ಸಣ್ಣ ಜ್ವರ ಎಂದು ನಿರ್ಲಕ್ಷ್ಯವಹಿಸಿದ ಪರಿಣಾಮ ಯುವಕ ಜೀವವನ್ನೇ ಕಳೆದುಕೊಂಡಿದ್ದಾನೆ.

ಚಿರಂಜೀವಿ ಸಾವನ್ನಪ್ಪಿದ ಯುವಕ. ಗಟ್ಟಿ ಮುಟ್ಟಾಗಿದ್ದ ಚಿರಂಜೀವಿ ಲಾಂಡ್ರಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಕಳೆದ ಕೆಲವು ದಿನಗಳ ಹಿಂದೆ ಈತನಿಗೆ ಜ್ವರ ಕಾಣಿಸಿಕೊಂಡಿದ್ದು, ಈ ವೇಳೆ ಸಣ್ಣ ಜ್ವರ ಎಂದು ನಿರ್ಲಕ್ಷ್ಯವಹಿಸಿದ ಯುವಕ ಯಾವುದೇ ಕೋವಿಡ್​ ಪರೀಕ್ಷೆ ಮಾಡಿಸಿಕೊಂಡಿಲ್ಲ. ಅಲ್ಲದೇ, ಇದಕ್ಕೆ ಯಾವುದೇ ಚಿಕಿತ್ಸೆಯನ್ನು ಪಡೆಯಲು ಮುಂದಾಗಿಲ್ಲ. ಈತನ ಈ ಸಣ್ಣ ನಿರ್ಲಕ್ಷ್ಯದಿಂದಾಗಿ ಈಗ ಭಾರೀ ಬೆಲೆಯನ್ನು ತೆರಬೇಕಾಗಿದೆ.

ಜ್ವರ ಕಾಣಿಸಿಕೊಂಡ ಎರಡು ದಿನದ ಬಳಿಕ ಜ್ವರ ಹೋಗಿದೆ ಎಂದು ಯುವಕ ಭಾವಿಸಿದ್ದ. ಆದರೆ, ಇದ್ದಕ್ಕಿಂದಂತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಈ ವೇಳೆ ಚಿರಂಜೀವಿಯನ್ನು ತಕ್ಷಣಕ್ಕೆ ಕೆಸಿ ಜನರಲ್ ಆಸ್ಪತ್ರೆ ಗೆ ಕೊಂಡೊಯ್ಯಲಾಗಿತ್ತು. ಆದರೆ ಹಾಸಿಗೆ ಹಾಗೂ ಚಿಕಿತ್ಸೆ ಸಿಗದ ಕಾರಣ ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ ಎಂದು ಚಿರಂಜೀವಿ ಸಹೋದರ ತಿಳಿಸಿದ್ದಾನೆ.

ಬಹುತೇಕ ಮಂದಿ ವಯಸ್ಸಿನಲ್ಲಿ ಗಟ್ಟಿ ಮುಟ್ಟಾಗಿರುವ ನಮಗೆ ಸೋಂಕು ತಗಲುವುದಿಲ್ಲ. ತಗುಲಿದರೂ ತಾವು ಗುಣಮುಖರಾಗಬಹುದು ಎಂಬ ನಂಬಿಕೆಯಲ್ಲಿರುತ್ತಾರೆ. ಇದೇ ಹಿನ್ನಲೆ ಸೋಂಕಿನ ಬಗ್ಗೆ ಜನರು ನಿರ್ಲಕ್ಷ್ಯವಹಿಸಿ ಯಾವುದೇ ಸೂಕ್ತ ಮುಂಜಾಗ್ರತಾ ಕ್ರಮವಹಿಸುತ್ತಿಲ್ಲ. ಅಲ್ಲದೇ, ಸೋಂಕಿನ ಲಕ್ಷಣಗಳೊಂದಿಗೆ ಸಾರ್ವಜನಿಕವಾಗಿ ಓಡಾಡುತ್ತಿರುವುದು ಮತ್ತಷ್ಟು ಸೋಂಕು ಹರಡುವಿಕೆಗೂ ಕಾರಣವಾಗಿದೆ. ಇದೇ ಹಿನ್ನಲೆ ಕೊರೋನಾ ಬಗ್ಗೆ ಯಾವುದೇ ಉಡಾಫೆ ತೋರದೇ ಜಾಗ್ರತೆ ವಹಿಸುವುದು ಅಗತ್ಯವಾಗಿದೆ. ಕೋವಿಡ್ ಸೋಂಕಿನ ಯಾವುದೇ ಲಕ್ಷಣ ಕಾಣಿಸಿಕೊಂಡ ತಕ್ಷಣ ಪರೀಕ್ಷೆಗೆ ಒಳಗಾಗಿ ಪ್ರತ್ಯೇಕವಾಗಿರಿ. ಅಲ್ಲದೇ ವೈದ್ಯರ ಸಲಹೆಯಂತೆ ಚಿಕಿತ್ಸೆ ಅನುಸರಿಸುವುದು ಅವಶ್ಯಕವಾಗಿದೆ.

- Advertisement -

Related news

error: Content is protected !!