Friday, July 24, 2026
spot_imgspot_img
spot_imgspot_img

ಬಂಟ್ವಾಳ ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಜಗನ್ನಾಥ ಚೌಟ ಆಯ್ಕೆ

- Advertisement -
- Advertisement -

ಬಂಟ್ವಾಳ : ಬಂಟ್ವಾಳ ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಜಗನ್ನಾಥ ಚೌಟ ಮಾಣಿ-ಬದಿಗುಡ್ಡೆ ಇವರು ಆಯ್ಕೆಯಾಗಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾಗಿ, ಜಿಲ್ಲೆಯ ಹಲವು ದೈವಸ್ಥಾನ ದೇವಸ್ಥಾನಗಳ ಜೀರ್ಣೋದ್ದಾರ ಸಮಿತಿಯ ಜವಾಬ್ದಾರಿಯನ್ನು ವಹಿಸಿಕೊಂಡು, ಧಾರ್ಮಿಕವಾಗಿ ಸಾಮಾಜಿಕವಾಗಿ ಜನಾನುರಾಗಿಯಾಗಿರುತ್ತಾರೆ.

ಮಾತ್ರವಲ್ಲದೆ ಪ್ರಗತಿಪರ ಕೃಷಿಕರೂ ಆಗಿರುತ್ತಾರೆ.ಉಪಾಧ್ಯಕ್ಷರಾಗಿ ಐತಪ್ಪ ಆಳ್ವ ಬಿಸಿರೋಡ್, ಕಾರ್ಯದರ್ಶಿಯಾಗಿ ಸದಾನಂದ ಆಳ್ವ ಕಂಪ, ಕೋಶಾಧಿಕಾರಿಯಾಗಿ ಲೋಕೇಶ್ ಶೆಟ್ಟಿ ಕುಳ, ಜೊತೆ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಶೆಟ್ಟಿ ಸಜಿಪ, ಜೊತೆ ಕೋಶಾಧಿಕಾರಿಯಾಗಿ ಶ್ರೀವಿದ್ಯಾ ರೈ, ಬಿಸಿರೋಡ್ ಆಯ್ಕೆಯಾಗಿದ್ದಾರೆ.ಪದಾಧಿಕಾರಿಗಳ ಆಯ್ಕೆಯ ಸಭೆಯು ಬಂಟ್ವಾಳ ತಾಲೂಕು ಬಂಟರ ಭವನದ ಸಭಾಂಗಣದಲ್ಲಿ ಜರಗಿತು.ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಕಿರಣ್ ಹೆಗ್ಡೆ ಅನಂತಾಡಿ, ವಿವೇಕ್‌ ಶೆಟ್ಟಿ ನಗ್ರಿಗುತ್ತು, ಲೋಕನಾಥ ಶೆಟ್ಟಿ ಬಿಸಿರೋಡ್, ಶಾಂತರಾಮ ಶೆಟ್ಟಿ ಬೋಳಂತೂರು ನಡೆಸಿಕೊಟ್ಟರು. ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಮತ್ತು ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

- Advertisement -

Related news

error: Content is protected !!