Friday, July 24, 2026
spot_imgspot_img
spot_imgspot_img

ಬಂಟ್ವಾಳ: ರಾಂಗ್ ಸೈಡ್‌ನಿಂದ ಬಂದ ಕಾರು ಬೈಕ್‌ಗೆ ಢಿಕ್ಕಿ; ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

- Advertisement -
- Advertisement -

ಬಂಟ್ವಾಳ: ರಾಂಗ್ ಸೈಡ್‌‌ನಿಂದ ಕಾರೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಗಂಭೀರ ಗಾಯಗೊಂಡ ಘಟನೆ ಬಿ.ಸಿ.ರೋಡ್ ಸಮೀಪದ ತಲಪಾಡಿ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿರುವುದಾಗಿ ವರದಿಯಾಗಿದೆ.

ವಿಟ್ಲ ಮೂಲದ, ಮಿಫ್ಸ್‌ ಸಂಸ್ಥೆಯ ವಿದ್ಯಾರ್ಥಿ ವಿದ್ಲಾಜ್ ಗಂಭೀರ ಗಾಯಗೊಂಡ ಬೈಕ್ ಸವಾರ ಎಂದು ತಿಳಿದುಬಂದಿದೆ. ಬೈಕ್ ನಲ್ಲಿದ್ದ ಸಹ ಸವಾರನು ಗಾಯಗೊಂಡಿದ್ದು, ಹೆಸರು ತಿಳಿದುಬಂದಿಲ್ಲ.

ಇವರಿಬ್ಬರೂ ಅಡ್ಯಾರ್‌‌ನಲ್ಲಿ ಕಾರ್ಯಾಚರಿಸುತ್ತಿರುವ ಮಿಫ್ಸ್‌ ಸಂಸ್ಥೆಯಲ್ಲಿ ಫೈರ್ ಅಂಡ್ ಸೇಫ್ಟಿ ಕೋರ್ಸ್ ಕಲಿಯುತ್ತಿದ್ದರು. ಎಂದಿನಂತೆ ಕೋರ್ಸ್ ಮುಗಿಸಿ ಅಡ್ಯಾರ್‌‌ನಿಂದ ವಿಟ್ಲದತ್ತ ಬೈಕ್‌‌ನಲ್ಲಿ ತೆರಳುತ್ತಿದ್ದಾಗ ತಲಪಾಡಿಯಲ್ಲಿ ರಾಂಗ್ ಸೈಡ್ ನಲ್ಲಿ ಅತೀ ವೇಗದಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಘಟನೆಯಿಂದ ಬೈಕ್ ನಜ್ಜುಗುಜ್ಜಾಗಿದೆ. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬ್ರಹ್ಮರಕೂಟ್ಟು ಟೋಲ್ ತಪ್ಪಿಸುವ ನಿಟ್ಟಿನಲ್ಲಿ ತಲಪಾಡಿಯ ಸರ್ವಿಸ್ ರಸ್ತೆಗೆ ವಾಹನಗಳು ಹೋಗುವಾಗ ಇಂತಹ ಅವಘಡ ಸಂಭವಿಸುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

- Advertisement -

Related news

error: Content is protected !!