


ಬಂಟ್ವಾಳ: ವ್ಯಕ್ತಿಯೋರ್ವ ತನ್ನ ಪೇಸ್‌ಬುಕ್‌ನಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿದ್ದು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕು ಸಜೀಪ ಮುನ್ನೂರು ಗ್ರಾಮದ ನಂದಾವರ ನಿವಾಸಿ ಉಮ್ಮರ್ ಫಾರೂಕ್ ಎಂಬಾತ ದಿನಾಂಕ: 13-06-2025 ರಂದು ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣಾ ಅ.ಕ್ರ 68/2025 ಕಲಂ:109, 324(4), ಜೊತೆಗೆ 3(5) BNS ರಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದ ದಾಖಲಾಗಿ ಪ್ರಕರಣದಲ್ಲಿ ತನಿಖೆ ಪೊರೈಸಿ ಸುಳ್ಳು ದೂರು ನೀಡಿದ್ದಾರೆಂದು ಮಾನ್ಯ ನ್ಯಾಯಾಲಯಕ್ಕೆ ಬಿ ಅಂತಿಮ ವರದಿ ಸಲ್ಲಿಸಿತ್ತು. ನಂತರ ಸುಳ್ಳು ದೂರು ನೀಡಿದ ಉಮರ್ ಫಾರೂಕನ ಮೇಲೆ ಠಾಣೆಯಲ್ಲಿ ಅ.ಕ್ರ 128/2025 ಕಲಂ:192, 353 (1) (B), 230 (1),248(A) BNS ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಉಮರ್ ಫಾರೂಕನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ನ್ಯಾಯಾಂಗ ಬಂಧನದಲ್ಲಿರುತ್ತಾನೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಅಶ್ರಫ್ ತಲಪಾಡಿ ಎಂಬಾತನು ತನ್ನ ಫೇಸ್‌ಬುಕ್ ಖಾತೆಯಲ್ಲಿ ಸುಳ್ಳು ಸುದ್ದಿ ಹರಡಿರುವುದಾಗಿದೆ. ಮುಂದುವರಿದು ರಿಯಾಜ್ ಕಡಂಬು ಎಂಬವರು ಈ ವಿಚಾರವಾಗಿ ತನಿಖೆಯಲ್ಲಿರುವ ಪ್ರಕರಣ ಬಗ್ಗೆ ಅಶ್ರಫ್ ತಲಪಾಡಿರವರಿಗೆ ನೀಡಿದ ನೋಟೀಸಿನ ಬಗ್ಗೆ ಸತ್ಯ – ಸತ್ಯತೆಯನ್ನು ತಿಳಿಯದೇ ಅಪೂರ್ಣವಾದ ಮಾಹಿತಿಯೊಂದಿಗೆ ಸಂಬಂಧವಿಲ್ಲದ ಎರಡು ಘಟನೆಗಳನ್ನು ಹೋಲಿಕೆ ಮಾಡಿಕೊಂಡು ಧರ್ಮದ ಆಧಾರದಲ್ಲಿ ಸಂಬಂಧವನ್ನು ಕಲ್ಪಿಸಿ, ಸಾಮಾಜಿಕ ಜಾಲ ತಾಣವಾದ ತನ್ನ ಫೇಸ್‌ಬುಕ್ ಖಾತೆಯಲ್ಲಿ ದಿನಾಂಕ: 30.08.2025 ರಂದು ಹರಿಬಿಟ್ಟು ಪೊಲೀಸ್ ಇಲಾಖೆಯ ಬಗ್ಗೆ ಸುಳ್ಳು ಸುದ್ದಿಯನ್ನು ಪ್ರಕಟಿಸಿ, ಜನರು ಸಾರ್ವಜನಿಕ ನೆಮ್ಮದಿಯ ವಿರುದ್ದ ಅಪರಾಧ ಎಸಗುವಂತೆ ಪ್ರೇರೆಪಿಸಿ ಜಾತಿ, ಧರ್ಮದ ಆಧಾರದ ಮೇಲೆ ವೈರತ್ವ, ದ್ವೇಷ ಅಥವಾ ವೈಮನಸ್ಸು ಭಾವನೆಗಳನ್ನು ಬೆಳೆಸಲು ಪ್ರಯತ್ನಿಸಿರುವುದಾಗಿದೆ . ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ. ಕ್ರ : 134/2025 ಕಲಂ:353(2) BNS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.








