Friday, September 4, 2026
spot_imgspot_img
spot_imgspot_img

ಬಂಟ್ವಾಳ: ಇಂದಿರಾ ಕ್ಷೇಮ ನಿಧಿಯ ವತಿಯಿಂದ ಕೋವಿಡ್ ಬಂದ ಮನೆಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ!

- Advertisement -
- Advertisement -

ಬಂಟ್ವಾಳ: ಕೋವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದಿರಾ ಕ್ಷೇಮ ನಿಧಿಯ ವತಿಯಿಂದ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈಯವರ ನೇತೃತ್ವದಲ್ಲಿ, ಕೋವಿಡ್ ಪಾಸಿಟಿವ್ ಬಂದ ಮನೆಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ನೀಡುವ ವಿಶೇಷ ಕಾರ್ಯಕ್ರಮ ಪಿಲಾತಬೆಟ್ಟು ಗ್ರಾಮದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪ್ರಗತಿಪರ ಕೃಷಿಕರಾದ ಸುಧಾಕರ್ ಶೆಣೈ ಖಂಡಿಗ ಕಜೆಕಾರು, ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೋರ, ಗ್ರಾಮ ಪಂಚಾಯತ್ ಸದಸ್ಯ ನೆಲ್ವಿಸ್ಟರ್, ಪುಷ್ಪಲತ ಸಾಲ್ಯನ್, ವನಿತಾ, ಲೀಲಾವತಿ, ವಲಯ ಅಧ್ಯಕ್ಷ ಬಾಲಾಜಿ ರಾವ್, ಮಹಿಳಾ ವಲಯ ಅಧ್ಯಕ್ಷೆ ಲಿಲ್ಲಿ ಡಿಸೋಜ, ಯುವ ವಲಯಾಧ್ಯಕ್ಷ ಲೋಕೇಶ್ ಕುಲಾಲ್, ಪ್ರಮುಖರಾದ ಮೋಹನ್ ಸಾಲ್ಯನ್, ವಿಕ್ಟರ್ ಡಿಸೋಜ, ಅರುಣ್ ಪೆರ್ನಾಂಡಿಸ್, ಮನೋಜ್, ಅಂರೋಸ್ ಮೊರಾಸ್, ರಾಜೇಂದ್ರ ಕೆ ವಿ, ಮತ್ತು ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

- Advertisement -

Related news

error: Content is protected !!