Saturday, June 20, 2026
spot_imgspot_img
spot_imgspot_img

ಬಂಟ್ವಾಳ: ಅಕ್ರಮವಾಗಿ ಲಕ್ಷಾಂತರ ರೂ ಮೌಲ್ಯದ ಕಟ್ಟಿಗೆ ಸಾಗಿಸುತ್ತಿದ್ದ ಲಾರಿ ಸಹಿತ ಆರೋಪಿ ಅರಣ್ಯಾಧಿಕಾರಿಗಳ ವಶ!

- Advertisement -
- Advertisement -

ಬಂಟ್ವಾಳ: ಪರವಾನಿಗೆ ಇಲ್ಲದೇ ಅಕ್ರಮವಾಗಿ ಲಕ್ಷಾಂತರ ರೂ. ಮೌಲ್ಯದ ಕಟ್ಟಿಗೆ ಸಾಗಿಸುತ್ತಿದ್ದ ಲಾರಿ ಸಹಿತ ಆರೋಪಿಯನ್ನು ಮಂಗಳೂರು ವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡ ಪ್ರಕರಣ ದಾಖಲಿಸಿದ ಘಟನೆ ಮಂಗಳೂರು ತಾಲೂಕಿನ ಸುರತ್ಕಲ್ ಎಂಬಲ್ಲಿ ನಡೆದಿದೆ.


ಆರೋಪಿ ಚಾಲಕ ಸರ್ಫರಾಜ್ ಎಂಬಾತನನ್ನು ಬಂಧಿಸಿ ಅತನ ಮೇಲೆ ಪ್ರಕರಣ ದಾಖಲಿಸಿಕೊಂಡು ಸೊತ್ತು ಮತ್ತು ವಾಹನವನ್ನು ಸರ್ಕಾರದ ಪರವಾಗಿ ಅಮಾನತು ಮಾಡಿಕೊಳ್ಳಲಾಯಿತು. ವಶಪಡಿಸಿಕೊಂಡ ಒಟ್ಟು ಸೊತ್ತುಗಳ ಅಂದಾಜು ಮೌಲ್ಯ 2 ಲಕ್ಷ ಎಂದು ತಿಳಿಸಿದ್ದಾರೆ.

ಸೋಮವಾರದಂದು ಮಂಗಳೂರು ತಾಲೂಕು ಸುರತ್ಕಲ್ ಗ್ರಾಮದ ಮುಕ್ಕ ಎಂಬಲ್ಲಿ ಅಕ್ರಮವಾಗಿ ರಹದಾರಿ ರಹಿತ ಕಟ್ಟಿಗೆ ಸಾಗಾಟ ಮಾಡುವವರನ್ನು ಮಂಗಳೂರು ವಲಯ ಅರಣ್ಯಾಧಿಕಾರಿಯಾದ ಶ್ರೀಧರ್ ಪಿ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಕೃಷ್ಣ , ವಿನಯ್ ಕುಮಾರ್, ಮೋಹನ್, ಸೋಮನ ಗೌಡ ಪಾಟೀಲ್ ಹಾಗೂ ಚಾಲಕ ಸುನಿಲ್ ಬಿ ಸಿ ಪತ್ತೆ ಹಚ್ಚಿ ಕೇಸು ದಾಖಲಿಸಿರುತ್ತಾರೆ.

ಮುಂದಿನ ತನಿಖೆಯನ್ನು ಡಿಸಿಎಫ್ ಕರಿಕಳನ್ ಮತ್ತು ಎಸಿಎಫ್ ಸುಬ್ರಮಣ್ಯ ರಾವ್ ಇವರ ನಿರ್ದೇಶನದಂತೆ ವಲಯ ಅರಣ್ಯಾಧಿಕಾರಿ ಶ್ರೀಧರ್ ಪೀ ನೆಡೆಸುತಿದ್ದಾರೆ.

- Advertisement -

Related news

error: Content is protected !!