Thursday, June 18, 2026
spot_imgspot_img
spot_imgspot_img

ಬಂಟ್ವಾಳ: ಡಿವೈಡರ್ ಮೇಲೆ ಹುಲ್ಲು ತೆಗೆಯುತ್ತಿದ್ದ ಕಾರ್ಮಿಕನಿಗೆ ಕಾರು ಡಿಕ್ಕಿ- ಗಂಭೀರ ಗಾಯ

- Advertisement -
- Advertisement -

ಬಂಟ್ವಾಳ: ಡಿವೈಡರ್ ಮೇಲೆ ಹುಲ್ಲು ತೆಗೆಯುತ್ತಿದ್ದ ಕಾರ್ಮಿಕನ ಮೇಲೆ ಕಾರು ಹರಿದು ಗಂಭೀರ ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತುಂಬೆ ಎಂಬಲ್ಲಿ ನಡೆದಿದೆ.

ಹಾವೇರಿ ಮೂಲದ ನಾಗರಾಜ್ ಲಮಾಣಿ ಗಾಯಗೊಂಡ ಕಾರ್ಮಿಕ.

ಮಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್ ಮೇಲೆ ಹತ್ತಿದೆ. ಈ ಸಂದರ್ಭದಲ್ಲಿ ಡಿವೈಡರ್ ನಲ್ಲಿ ಹುಲ್ಲು ತೆಗೆಯುವ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಡಿಕ್ಕಿಯಾಗಿದೆ. ಬಳಿಕ ಕಾರು ವಿರುದ್ದ ರಸ್ತೆಗೆ ಮುನ್ನುಗ್ಗಿದೆ.

ಅದೇ ಸಮಯದಲ್ಲಿಮುಂಭಾಗದಲ್ಲಿ ಬರುತ್ತಿದ್ದ ಕಾರು ಮತ್ತು ಬೈಕ್ ಎರಡು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಹಾಗೂ ಬೈಕ್ ಜಖಂಗೊಂಡಿದೆ. ಆದರೆ ಎರಡು ವಾಹನದಲ್ಲಿದ್ದ ಸವಾರರಿಗೆ ಯಾವುದೇ ಗಾಯವಾಗಿಲ್ಲ. ಗಾಯಗೊಂಡ ಕೂಲಿ ಕಾರ್ಮಿಕನನ್ನು ಮಂಗಳೂರು ‌ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

Related news

error: Content is protected !!