Monday, June 15, 2026
spot_imgspot_img
spot_imgspot_img

ಬಂಟ್ವಾಳ: ಮನೆಯ ಶೆಡ್ ನಲ್ಲಿದ್ದ ರೂ 9,23,200/- ಮೌಲ್ಯದ ಬಿಲ್ಡಿಂಗ್ ಸಾಮಾಗ್ರಿ ಕಳವು..!

- Advertisement -
- Advertisement -

ಬಂಟ್ವಾಳ: ಮನೆಯ ಪಕ್ಕದಲ್ಲಿರುವ ಶೆಡ್ ನಲ್ಲಿದ್ದ ಬಿಲ್ಡಿಂಗ್ ಕೆಲಸಕ್ಕೆ ಬೇಕಾದ ಸಾಮಾಗ್ರಿಗಳಾದ ಕಬ್ಬಿಣದ ಶೀಟು, ಜಾಕ್ ,ಸ್ಕಪೋಲ್ಡಿಂಗ್ ಕಳವು ಮಾಡಿದ ಘಟನೆ ಅಮ್ಮೆಮ್ಮಾರ್ ಮನೆ ಪುದು ಗ್ರಾಮ ಬಂಟ್ವಾಳದಲ್ಲಿ ನಡೆದಿದೆ.

ಆರೋಪಿ ಶರೂಪ್ ಆಲಂನು ಎಂದು ಗುರತಿಸಲಾಗಿದೆ.

ಅಮ್ಮೆಮ್ಮಾರ್ ಮನೆ ಪುದು ಗ್ರಾಮ ಬಂಟ್ವಾಳ ನಿವಾಸಿ ಹಮ್ಮಬ್ಬ ಮರ್ಜೂಕ್ ಸಿವಿಲ್ ಇಂಜಿನಿಯರ್ ಮಾಡಿ ಸೈಟ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದು. ಸೈಟ್ ನ ಬಿಲ್ಡಿಂಗ್ ಕೆಲಸಕ್ಕೆ ಬೇಕಾದ ಸಾಮಾಗ್ರಿಗಳಾದ ಕಬ್ಬಿಣದ ಶೀಟು, ಜಾಕ್ ,ಸ್ಕಪೋಲ್ಡಿಂಗ್ ಇತ್ಯಾದಿಗಳನ್ನು ಮನೆಯ ಪಕ್ಕದಲ್ಲಿರುವ ಶೆಡ್ ನಲ್ಲಿ ಇಡುತ್ತಿದ್ದರು ಇವರ ಜೊತೆ ಸುಮಾರು 2 ವರ್ಷದಿಂದ ಶರೂಪ್ ಆಲಂ ಎಂಬಾತನು ಕೆಲಸ ಮಾಡಿಕೊಂಡಿದ್ದಾನೆ. ಇವರು ಬೆಂಗಳೂರಿಗೆ ಹೋಗಿ ಬೆಳಿಗ್ಗೆ ಮನೆಗೆ ಬಂದು ಶೆಡ್ ಗೆ ತೆರಳಿ ನೋಡಿದಾಗ ಅಲ್ಲಿದ್ದ ವಸ್ತುಗಳು ಕಾಣೆಯಾಗಿರುತ್ತದೆ.

ಈ ಬಗ್ಗೆ ವಿಚಾರಿಸಿದಾಗ ಆರೋಪಿ ಶರೂಪ್ ಆಲಂನು ಶೆಡ್ ನಲ್ಲಿದ್ದ ಒಟ್ಟು ರೂ 9,23,200/- ಮೌಲ್ಯದ ಬಿಲ್ಡಿಂಗ್ ಕೆಲಸಕ್ಕೆ ಬೇಕಾದ ಸಾಮಾಗ್ರಿಗಳಾದ ಕಬ್ಬಿಣದ ಶೀಟು, ಜಾಕ್ ,ಸ್ಕಪೋಲ್ಡಿಂಗ್ ಇತ್ಯಾದಿಗಳನ್ನು ಟಾಟಾ ಎಸಿಇ ವಾಹನದಲ್ಲಿ ಕಳವು ಮಾಡಿಕೊಂಡು ಹೋಗಿರುವುದು ತಿಳಿದುಬಂದಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

- Advertisement -

Related news

error: Content is protected !!