Saturday, May 4, 2024
spot_imgspot_img
spot_imgspot_img

ಬಂಟ್ವಾಳ: ಜಾಗದ ವಿಚಾರದಲ್ಲಿ ತಕರಾರು; ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ, ಹಲ್ಲೆ..!

- Advertisement -G L Acharya panikkar
- Advertisement -

ಬಂಟ್ವಾಳ: ಜಾಗದ ವಿಚಾರದಲ್ಲಿ ಮಹಿಳೆಯೋರ್ವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಿರುವ ಘಟನೆ ಕೆದಿಲ ಗ್ರಾಮ ಬಂಟ್ವಾಳದಲ್ಲಿ ನಡೆದಿದೆ.

ಆರೋಪಿಗಳನ್ನು ಹೈದರಾಲಿ, ಹಬೀಬ್‌ ಮೊಹ್ಸಿನ್‌ ಎಂದು ಗುರುತಿಸಲಾಗಿದದೆ.

ಕೆದಿಲ ಗ್ರಾಮ ಬಂಟ್ವಾಳ ನಿವಾಸಿ ಸವಿತಾ ಭಟ್‌ ಪ್ರಾಯ (52) ಎಂಬವರ ಕೆದಿಲ ಗ್ರಾಮದಲ್ಲಿ, ಸದ್ರಿಯವರ ಗಂಡನ ಒಡೆತನದಲ್ಲಿರುವ ಜಮೀನಿನ ಪಕ್ಕದಲ್ಲಿ ಆರೋಪಿ ಹೈದಾರಾಲಿ ಎಂಬಾತನಿಗೆ‌ ಸೇರಿದ ಜಾಗವಿದ್ದು,ಜಮೀನುಗಳ ಗಡಿಗೆ ಸಂಬಂಧಿಸಿದಂತೆ ತಕರಾರು ಇರುವುದಾಗಿದೆ. ಸಂಜೆ ಸಮಯ, ಗಡಿ ತಕರಾರು ಇರುವ ಜಾಗದಲ್ಲಿ ಆರೋಪಿ ಹೈದರಾಲಿ, ಹಬೀಬ್‌ ಮೊಹ್ಸಿನ್‌ ಹಾಗೂ ಇತರ 15 ಜನರು ಬೇಲಿ ಹಾಕಲು ಬಂದಾಗ, ಸವಿತಾ ಭಟ್‌ ಅವರ ಗಂಡ ಅಕ್ಷೇಪ ವ್ಯಕ್ತಪಡಿಸಿರುತ್ತಾರೆ. ಆ ವೇಳೆ ಹಬೀಬ್‌ ಮೊಹ್ಸಿನ್‌ ಎಂಬವರು ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಕಬ್ಬಿಣದ ಸುತ್ತಿಗೆಯಿಂದ ಹಲ್ಲೆ ನಡೆಸಿರುತ್ತಾರೆ.

ಬಳಿಕ ಆರೋಪಿ ಹೈದರಾಲಿ ಹಾಗೂ ಇತರರು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ತೆರಳಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಸವಿತಾ ಭಟ್‌ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 10/2024ಕಲಂ 324,504,506 R/w 149 IPC ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣ ಮುಂದುವರಿದಂತೆ ಹೈದರಾಲಿರವರ ಪತ್ನಿಯು, ತನ್ನ ಗಂಡ ಜಮೀನಿಗೆ ಬೇಲಿ ಹಾಕುತ್ತಿದ್ದಾಗ, ಆರೋಪಿಗಳಾದ ಸವಿತಾ ಭಟ್‌ ಹಾಗೂ ಶಿವರಾಮ್‌ ಭಟ್‌ ರವರು ತಕರಾರು ತೆಗೆದು, ಬೇಲಿಯನ್ನು ಕಿತ್ತು ಬಿಸಾಕಿರುತ್ತಾರೆ. ಈ ವೇಳೆ ಬೇಲಿಯ ಕಂಬ ಅಲ್ಲಿ ಕೆಲಸ ಮಾಡುತ್ತಿದ್ದ ಆಲಿ ಎಂಬವರಿಗೆ ತಾಗಿ ರಕ್ತಗಾಯವಾಗಿರುತ್ತದೆ. ಆರೋಪಿಗಳು ಸ್ಥಳದಲ್ಲಿದ್ದ ಸವಿತಾ ಭಟ್‌ ಗೆ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿರುವುದಲ್ಲದೇ, ಅನುಚಿತವಾಗಿ ವರ್ತಿಸಿರುತ್ತಾರೆ. ಬಳಿಕ ಜೀವ ಬೆದರಿಕೆ ಹಾಕಿ ತೆರಳಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಗಾಯಾಳುಗಳು ಚಿಕಿತ್ಸೆಗಾಗಿ ಪುತ್ತೂರಿನ ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 11/2024ಕಲಂ 324,354,504 R/w 34 IPC ಪ್ರಕರಣ ದಾಖಲಾಗಿದ್ದು, ಎರಡೂ ಪ್ರಕರಣ ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!