Sunday, June 14, 2026
spot_imgspot_img
spot_imgspot_img

ಬಂಟ್ವಾಳ: ಕೆ.ಎಸ್.ಅರ್.ಟಿ.ಸಿ.ಬಸ್ ಹಾಗೂ ಬೈಕ್ ಢಿಕ್ಕಿ; ಸವಾರನಿಗೆ ಗಾಯ

- Advertisement -
- Advertisement -

ಬಂಟ್ವಾಳ: ಕೆ.ಎಸ್.ಅರ್.ಟಿ.ಸಿ.ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ಬೈಪಾಸ್ ಜಂಕ್ಷನ್ ಎಂಬಲ್ಲಿ ನಡೆದಿದೆ.

ರಾಯಿ ನಿವಾಸಿ ಫ್ರಾನ್ಸಿಸ್ ಲೊಬೋ ಗಾಯಗೊಂಡ ವ್ಯಕ್ತಿ. ಫ್ರಾನ್ಸಿಸ್ ಲೋಬೋ ಅವರು ಬಂಟ್ವಾಳ ಪೇಟೆಯ ಕಡೆಯಿಂದ ಮೂಡಬಿದಿರೆಯ ಕಡೆ ಹೋಗುವ ವೇಳೆ ನಾಲ್ಕು ಮಾರ್ಗ ಕೂಡುವ ಬೈಪಾಸ್ ಜಂಕ್ಷನ್ ನಲ್ಲಿ ಅಪಘಾತ ನಡೆದಿದೆ.

ಬೈಕ್ ಸವಾರ ಬಂಟ್ವಾಳದಿಂದ ಹೈವೆಯ ಮೂಲಕ ಮೂಡಬಿದಿರೆ ರಸ್ತೆಗೆ ಏಕಾಏಕಿ ನುಗ್ಗಿಸಿದ ಪರಿಣಾಮವಾಗಿ ಬಸ್ ಚಾಲಕನಿಗೆ ಬೈಕ್ ಬರುವುದು ಗೊತ್ತಾಗದೇ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಸರಕಾರಿ ಬಸ್ ಚಾಲಕ ಅಪಘಾತ ತಪ್ಪಿಸಲು ಬ್ರೇಕ್ ಹಾಕಿ ಸಾಕಷ್ಟು ಪ್ರಯತ್ನ ಪಟ್ಟ ಬಗ್ಗೆ ಅಲ್ಲಿನ ಸ್ಥಳೀಯರು ತಿಳಿಸಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Insta: glacharyajewellers
Fb: glacharya

- Advertisement -

Related news

error: Content is protected !!