Sunday, June 14, 2026
spot_imgspot_img
spot_imgspot_img

ಬಂಟ್ವಾಳ: ಟೆಲಿಗ್ರಾಂ ಆಪ್ ಮೂಲಕ ಲಕ್ಷಾಂತರ ರೂ. ವರ್ಗಾಯಿಸಿ ವಂಚನೆ; ಪ್ರಕರಣ ದಾಖಲು..!

- Advertisement -
- Advertisement -

ಬಂಟ್ವಾಳ: ಅಪರಿಚಿತ ವ್ಯಕ್ತಿ ಟೆಲಿಗ್ರಾಂ ಆಪ್ ಮೂಲಕ ಸಂಪರ್ಕಿಸಿ ಹಂತಹಂತವಾಗಿ ಬೇರೆ ಬೇರೆ ಕಾರಣಗಳನ್ನು ನೀಡಿ, ವ್ಯಕ್ತಿಯೋರ್ವರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ಹಣವನ್ನು ವರ್ಗಾಯಿಸಿ ವಂಚನೆ ಮಾಡಿದ ಘಟನೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದದೆ.

ವ್ಯಕ್ತಿಯೋರ್ವರು ವರ್ಕ್ ಪ್ರಮ್ ಹೋಮ್ ಕೆಲಸಕ್ಕಾಗಿ ಹುಡುಕಾಡಿಕೊಂಡಿರುವಾಗ ಅನಾಮಧೇಯ ಟೆಲಿಗ್ರಾಂ ಆಪ್ ನಲ್ಲಿ, ವರ್ಕ್ ಪ್ರಮ್ ಹೋಮ್ ಕೆಲಸಕ್ಕೆ ಸಂಬಂಧಿಸಿದ ಮೇಸೆಜ್ ನ್ನು ಸ್ವಿಕರಿಸಿರುತ್ತಾರೆ. ಅಪರಿಚಿತ ವ್ಯಕ್ತಿಯೋರ್ವ ಇವರನ್ನು ಟೆಲಿಗ್ರಾಂ ಮೂಲಕ ಸಂಪರ್ಕಿಸಿ ಆತನ ಸೂಚನೆಗಳನ್ನು ಪಾಲಿಸುತ್ತಾ ಬಂದ ವ್ಯಕ್ತಿಯಿಂದ ಅಪರಿಚಿತ ವ್ಯಕ್ತಿಗಳು ಹಂತ ಹಂತವಾಗಿ ಬೇರೆ ಬೇರೆ ಕಾರಣಗಳನ್ನು ನೀಡಿ, ಬ್ಯಾಂಕ್ ಖಾತೆಗಳಿಗೆ ಒಟ್ಟು 9,20,000/- ಲಕ್ಷ ರೂ ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿರುತ್ತಾರೆ. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ:- 119/2024 ಕಲಂ: 66(C), 66(D), It Act ಹಾಗೂ ಕಲಂ: 419, 420 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!