Monday, April 29, 2024
spot_imgspot_img
spot_imgspot_img

ಬಂಟ್ವಾಳ: ವಾತ್ಸಲ್ಯಮಯಿ ಮಹಿಳಾ ಅಭಿವೃದ್ದಿ ಮತ್ತು ಸಂಶೋಧನಾ ಸಂಸ್ಥೆ (ರಿ)ಯ ದಶಮಾನೋತ್ಸವ ಕಾರ್ಯಕ್ರಮ ಸಾಧಕ ಮಹಿಳೆಯರಿಗೆ “ಗಿರಿಜಾ ರತ್ನ” ಪ್ರಶಸ್ತಿ ಪ್ರಧಾನ ಸಮಾರಂಭ

- Advertisement -G L Acharya panikkar
- Advertisement -

ಬಂಟ್ವಾಳ: ವಾತ್ಸಲ್ಯಮಯಿ ಮಹಿಳಾ ಅಭಿವೃದ್ದಿ ಮತ್ತು ಸಂಶೋಧನಾ ಸಂಸ್ಥೆ (ರಿ)ಯ ದಶಮಾನೋತ್ಸವ ಸಂಭ್ರಮವು ಬಿ.ಸಿ.ರೋಡು ಸ್ಪರ್ಶ ಕಲಾ ಮಂದಿರದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.

ಸಂಪನ್ಮೂಲ ವ್ಯಕ್ತಿ ವಕೀಲರು ಮತ್ತು ಸಂಧಾನಕಾರರು ಗೌರಿ ಶ್ರೇಯಸ್ ಇವರಿಂದ ಕಾರ್ಯಾಗಾರ ನಡೆಯಿತು. ನ್ಯಾಯವಾದಿಗಳು, ಪ್ರತಿಷ್ಠಿತ ಕರ್ನಾಟಕ ಸರಕಾರದ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರು, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ(ರಿ.)ಬಾಳ್ತಿಲ ಸಂಸ್ಥಾಪಕರಾದ ಶೈಲಜಾ ರಾಜೇಶ್ ಅಧ್ಯಕ್ಷತೆಯಲ್ಲಿ ನಡೆದ ದಶಮಾನೋತ್ಸವದ ಉದ್ಘಾಟನೆಯನ್ನು ಬೆಳ್ತಂಗಡಿ ತಾ.ರಬ್ಬರ್‍ ಬೆಳೆಗಾರರ ಸಹಕಾರಿ ಸಂಘ(ರಿ) ಅಧ್ಯಕ್ಷ ಶ್ರೀಧರ್‍ ಜಿ.ಭಿಡೆ, ದೀಪ ಬೆಳಗಿಸಿ ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಧರ್‍ ಶೆಟ್ಟಿ ಪುಳಿಂಚ ವಕೀಲರು, ಮಂಗಳೂರು, ಬೆಳ್ತಂಗಡಿ ತಾ.ಮುಂಡಾಜೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಾಲಿ, ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ, ಮೂತ್ರರೋಗ ತಜ್ಞರು ಮತ್ತು ಡಾ.ಬಿ.ಸಿ.ರಾಯ್ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತರಾದ ಡಾ| ಸದಾನಂದ ಪೂಜಾರಿ, ಬೆಂಗಳೂರು ಹೈಕೋರ್ಟ್‌ ವಕೀಲರಾದ ನವನೀತ್, ಬಿ.ಸಿ ರೋಡು ಅರಿವಳಿಕೆ ತಜ್ಞರು ಡಾ|ಶಶಿಕಲಾ ಸೋಮಯಾಜಿ, ಕುಂದಾಪುರ ತಾ.ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ರಾಧಾದಾಸ್, ಕಡಬ ಕಾಮಧೇನು ಮಹಿಳಾ ಸಹಕಾರಿ ಸಂಘ ಅಧ್ಯಕ್ಷೆ ಉಷಾ ಅಂಚನ್, ಮೂಡಬಿದಿರೆ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಸಾವಿತ್ರಿ ಕೇಶವ, ಜೆ.ಸಿ.ಐ ಬಂಟ್ವಾಳ ಘಟಕದ ಅಧ್ಯಕ್ಷೆ ರಶ್ಮಿ ವಚನ್ ಶೆಟ್ಟಿ ಉಪಸ್ಥಿತರಿದ್ದರು.

ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ(ರಿ. ಯನ್ನು ಕಳೆದ 10 ವರ್ಷಗಳ ಹಿಂದೆ ನ್ಯಾಯವಾದಿ ಶೈಲಜಾ ರಾಜೇಶ್‌ರವರ ತಾಯಿ ಶ್ರೀಮತಿ ಗಿರಿಜಾ ಇವರು ಉದ್ಘಾಟನೆಯನ್ನು ನೆರವೇರಿಸಿದ್ದರು. ಅವರ ಸ್ಮರಣಾರ್ಥವಾಗಿ ಸಾಧಕ ಮಹಿಳೆಯರಿಗೆ “ಗಿರಿಜಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಳಿಕ ಕ್ಯಾನ್ಸರ್‍ ಪೀಡಿತ, ನಿರಾಶ್ರಿತರಿಗೆ, ಅಸಹಾಯಕ ಮಹಿಳೆಯರಿಗೆ ಧನಸಹಾಯ ನೀಡಲಾಯಿತು. ಹಾಗೂ “ನವದುರ್ಗಾ ಶಕ್ತಿ” ಅಲ್ಬಂ ಸಾಂಗ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಉಚ್ಛ ನ್ಯಾಯಾಲಯದ ವಕೀಲರು ನವನೀತ್‌, ಡಾ ರಾಜೇಶ್‌ ಪೂಜಾರಿ, ವಕೀಲರು ಮತ್ತು ಸಂಧಾನಕಾರರು ಗೌರಿ ಶ್ರೇಯಸ್ ಹಾಗೂ ನ್ಯಾಯವಾದಿ ಶೈಲಜಾ ರಾಜೇಶ್‌ ಇವರುಗಳು ಕಾನೂನು, ಸಮಾಜ, ಕುಟುಂಬ, ಅಮಲು ಪದಾರ್ಥ, ಆರೋಗ್ಯ, ಸಾಮಾಜಿಕ ಜಾಲತಾಣ ಇದರ ಬಗ್ಗೆ ’ಮುಕ್ತ ಸಂವಾದ” ಕಾರ್ಯಕ್ರಮ ನಡೆಸಿಕೊಟ್ಟರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಾಜಿ ಸಚಿವ ರಮಾನಾಥ ರೈ, ಉಚ್ಛ ನ್ಯಾಯಾಲಯದ ವಕೀಲರು ನವನೀತ್‌, ಮೊಡಂಕಾಪು ಇನ್‌ಫೆಂಟ್ ಜೀಸಸ್ ಚರ್ಚ್‌‌ನ ಧರ್ಮಗುರು ರೆ|ಫಾ| ವಲೇರಿಯನ್ ಎಸ್.ಡಿ ಸೋಜ, ವಿಜಯಲಕ್ಷ್ಮೀ ಕಟೀಲು ಶಿಕ್ಷಕರು ಮತ್ತು ಸಾಹಿತಿ ಸರಕಾರಿ ಪ್ರೌಢಶಾಲೆ, ಮಂಚಿ ಕೊಳ್ನಾಡು, ಇರಾ ಬಿಲ್ಲವ ಸಂಘ ಅಧ್ಯಕ್ಷ ಜಯರಾಮ್ ಪೂಜಾರಿ ಇರಾ, ತಾ.ಪಂ.ಮಾಜಿ ಅಧ್ಯಕ್ಷ ಯಶವಂತ ಡಿ.ದೇರಾಜೆಗುತ್ತು, ಹರೀಶ್ಚಂದ್ರ ಆಳ್ವ, ಮಲ್ಲಿಕಾ ಆಳ್ವ, ಶುಭ ರಾಜೇಂದ್ರ, ರಶ್ಮಿ ಸತೀಶ್‌, ನಾರಾಯಣ ಪೆರ್ನೆ ಉಪಸ್ಥಿತರಿದ್ದರು.

ಸಂಜೆ “ಶ್ರೀಶೈಲ ಕಲಾ” ನೃತ್ಯ ತಂಡದಿಂದ ವೈವಿಧ್ಯಮಯ ನೃತ್ಯಾವಳಿ ಸಾಂಸ್ಕೃತಿಕ ವೈಭವ ನಡೆಯಿತು.

- Advertisement -

Related news

error: Content is protected !!