Sunday, July 26, 2026
spot_imgspot_img
spot_imgspot_img

ವಿಟ್ಲ: ಭ| ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಪಂಚಕಲ್ಯಾಣ ಮಹೋತ್ಸವ (ಫೆ.17) ಸೋಮವಾರದ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಭ। ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಬಸದಿ ತೀರ್ಥಂಕರರ ಮತ್ತು ಭ। ಶ್ರೀ ೧೦೦೮ ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ ಹಾಗೂ ಯಕ್ಷಿ ಶ್ರೀ ಪದ್ಮಾವತಿ ಅಮ್ಮನವರ ಮತ್ತು ಯಕ್ಷಿ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಪ್ರತಿಷ್ಠಾ ಮಹೋತ್ಸವವು 13-02-2025ನೇ ಗುರುವಾರದಿಂದ 17-02-2025ನೇ ಸೋಮವಾರದವರೆಗೆ ನಡೆಯಲಿದೆ.

ದಿನಾಂಕ:17-02-2025ನೇ ಸೋಮವಾರ ಬೆಳಿಗ್ಗೆ 8:30ರಿಂದ ನಿತ್ಯವಿಧಿ ಸಹಿತ ಸರ್ವರಕ್ಷಾಯಂತ್ರಾರಾಧನಾ ನಡೆದು , ಸಂಜೆ 4:30ಕ್ಕೆ ಅಗೋದಕ ಮೆರವಣಿಗೆ, ೧೦೦೮ ಕಲಶಗಳಿಂದ ಮಹಾಭಿಷೇಕ ಮಹೋತ್ಸವ, ಮಹಾಪೂಜೆ, ಮಹಾಮಂಗಳಾರತಿ, ಶ್ರೀಗಳವರ ಪಾದಪೂಜೆ, ಕುಂಕುಮೋತ್ಸವ, ಧ್ವಜಾವರೋಹಣ, ತೋರಣ ವಿಸರ್ಜನೆ ಮತ್ತು ಕಂಕಣ ವಿಸರ್ಜನೆ ನಡೆಯಲಿದೆ.ಸಂಜೆ 5:30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ರಮಪೂಜ್ಯ ಭಾರತಭೂಷಣ ಸ್ವಸ್ತಿಶ್ರೀ ಡಾ॥ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮಿ ಶ್ರೀ ಜೈನಮಠ, ಮೂಡುಬಿದಿರೆ, ಪರಮಪೂಜ್ಯ ಶ್ರೀಮದ್ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ ಅತಿಶಯ ಕ್ಷೇತ್ರ, ಶ್ರೀ ಜೈನ ಮಠ, ಹೊಂಬುಜ ಇವರು ಆಶೀರ್ವಚನ ಮತ್ತು ಪಾವನ ಸಾನ್ನಿಧ್ಯ ನೀಡಲಿದ್ದಾರೆ. ವಜ್ರದೇಹಿ ಮಠ ಗುರುಪುರ ಪರಮಪೂಜ್ಯ ಶ್ರೀ ರಾಜಶೇಖರಾನಂದ ಸ್ವಾಮೀಜಿ ದಿವ್ಯ ಉಪಸ್ಥಿತರಿರುವರು. ಭಾರತೀಯ ಜೈನ್ ಮಿಲನ್, ವಲಯ-8 ಉಪಾಧ್ಯಕ್ಷ ಸುದರ್ಶನ್ ಜೈನ್ ಪಂಜಿಕಲ್ಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಚೌಟರ ಅರಮನೆ, ಮೂಡುಬಿದಿರೆ ಕುಲದೀಪ್ ಎಂ., ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಡಿ. ವೇದವ್ಯಾಸ ಕಾಮತ್, ಎಂ.ಡಿ., ಪವರ್ ಟಿವಿ, ಬೆಂಗಳೂರು ರಾಕೇಶ್ ಶೆಟ್ಟಿ, ವಿಟ್ಲ ಉದ್ಯಮಿ ಹೆಚ್. ಜಗನ್ನಾಥ ಸಾಲ್ಯಾನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ರಾತ್ರಿ 7:00ರಿಂದ ಶಾರದಾ ಆರ್ಟ್ಸ್ ಕಲಾವಿದರು (ರಿ.), ಮಂಜೇಶ್ವರ ಅಭಿನಯಿಸುವ ಗಡಿನಾಡ ಕಲಾನಿಧಿ ಕೃಷ್ಣ ಜಿ. ಮಂಜೇಶ್ವರ ಇವರ ಸಾರಥ್ಯದ “ಕಥೆ ಎಡ್ಡೆಂಡು” ತುಳು ಹಾಸ್ಯಮಯ ನಾಟಕ ನಡೆಯಲಿದೆ.

- Advertisement -

Related news

error: Content is protected !!