Friday, May 3, 2024
spot_imgspot_img
spot_imgspot_img

ನೈತಿಕ ಪೊಲೀಸ್‌ಗಿರಿ; ಯುವತಿಗೆ ಚಾಕೊಲೇಟ್‌ ಕೊಡಿಸಿದ ಅನ್ಯಕೋಮಿನ ಯುವಕನಿಗೆ ಥಳಿತ…!

- Advertisement -G L Acharya panikkar
- Advertisement -

ಅನ್ಯ ಕೋಮಿನ ಯುವಕನ ಮೇಲೆ ಹತ್ತಾರು ಪುಂಡರ ಗುಂಪು ಹಲ್ಲೆ ಮಾಡಿ ಹಿಗ್ಗಾಮುಗ್ಗ ಥಳಿಸಿ ಪೊಲೀಸ್ ನೈತಿಕಗಿರಿ ನಡೆಸಿದ ಘಟನೆ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ನಡೆದಿದೆ.

ಯುವತಿಯೋರ್ವಳಿಗೆ ಡೈರಿ ಮಿಲ್ಕ್ ಚಾಕೊಲೇಟ್‌ ಕೊಡುತ್ತಿದ್ದ ಎಂಬ ಕಾರಣಕ್ಕೆ ಬಣಕಲ್ ಮೂಲದ ಯುವಕನಿಗೆ ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಹಲ್ಲೆ ನಡೆಸಲಾಗಿದೆ.

ಮಂಗಳವಾರ ಸಂಜೆ ಸಮಯದಲ್ಲಿ ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಅನ್ಯ ಕೋಮಿನ ಯುವಕ ಯುವತಿಯೋರ್ವಳಿಗೆ ಡೈರಿ ಮಿಲ್ಕ್ ಚಾಕೊಲೇಟ್ ಕೊಡುವಾಗ ಕಾರಿನಲ್ಲಿ ಬಂದ ಯುವಕರ ತಂಡದಿಂದ ಯುವಕನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಬಸ್ ನಿಲ್ದಾಣ ನಿಯಂತ್ರಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆಗಮಿಸಿದ ಪಿಎಸೈ ಮತ್ತು ಸಿಬ್ಬಂದಿ ಹಲ್ಲೆಗೊಳಗಾದ ಯುವಕನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಹಲ್ಲೆ ನಡೆಸಿದವರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

- Advertisement -

Related news

error: Content is protected !!