Friday, March 29, 2024
spot_imgspot_img
spot_imgspot_img

ಬೃಹತ್ ಪ್ರಮಾಣದ ಗಾಂಜಾ ವಶಪಡಿಸಿಕೊಂಡ ಬೆಳಗಾವಿ ಪೊಲೀಸರು: 13 ಆರೋಪಿಗಳ ಬಂಧನ..!

- Advertisement -G L Acharya panikkar
- Advertisement -

ಬೆಳಗಾವಿ: ಹದಿಹರೆಯದ ವಿದ್ಯಾರ್ಥಿಗಳಿಗೆ ಗಾಂಜಾ ನೀಡುತ್ತಿದ್ದ ಸ್ಮಗ್ಲಿಂಗ್ ಜಾಲವನ್ನು ಭೇದಿಸಿರುವ ಬೆಳಗಾವಿ ಪೊಲೀಸರು, 4 ಲಕ್ಷ ರೂ. ಮೌಲ್ಯದ ಗಾಂಜಾ ಮತ್ತು 13 ಆರೋಪಿಗಳ ಬಂಧನದ್ದಾರೆ.

ಬೆಳಗಾವಿ ಮಹಾನಗರದ‌ ಸಿಸಿಐಬಿ, ಮಾಳಮಾರುತಿ ಹಾಗೂ ಎಪಿಎಂಸಿ ಪೊಲೀಸರು ಪ್ರತ್ಯೇಕ ದಾಳಿ ನಡೆಸಿ 4 ಲಕ್ಷ ರೂ. ‌ಮೌಲ್ಯದ 27 ಕೆಜಿ ಬೃಹತ್ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ 13 ಜನರನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ 11 ಮೊಬೈಲ್, 1 ಕಾರು, 3 ಬೈಕ್, 15 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ.

ಬೆಳಗಾವಿ ಡಿಸಿಪಿ ಡಾ. ವಿಕ್ರಮ್ ಅಮಟೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು , ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು ಮಹಾರಾಷ್ಟ್ರದ ಮಿರಜ್‌ನಿಂದ ಗಾಂಜಾವನ್ನು ಬೆಳಗಾವಿಗೆ ಸ್ಮಗ್ಲಿಂಗ್ ‌ಮಾಡುತ್ತಿದ್ದರು. ದ್ವಿಚಕ್ರ ವಾಹನ, ಬೈಕ್‌ಗಳಲ್ಲಿ ಮಹಾರಾಷ್ಟ್ರದ ಮೀರಜ್‌ನಿಂದ ಬೆಳಗಾವಿಗೆ ಗಾಂಜಾ ಸಾಗಿಸುತ್ತಿದ್ದರು. ಆಯಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!