Tuesday, June 23, 2026
spot_imgspot_img
spot_imgspot_img

ಬೆಳಗಾವಿ: (ಆ.4) ಕರ್ನಾಟಕ ಕುಸ್ತಿ ಸಂಘ(ರಿ) ಹಾಗೂ ಬಾಲಚಂದ್ರ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಅಭಿಮಾನಿಗಳ ವತಿಯಿಂದ ರಾಜ್ಯಮಟ್ಟದ ಕುಸ್ತಿ ಪಂದ್ಯಾಟ

- Advertisement -
- Advertisement -

ಬೆಳಗಾವಿ: ಕರ್ನಾಟಕ ಕುಸ್ತಿ ಸಂಘ(ರಿ) ಹಾಗೂ ಬಾಲಚಂದ್ರ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಅಭಿಮಾನಿಗಳ ವತಿಯಿಂದ ಲಕ್ಷ್ಮಣ ಅಜಪ್ಪ ದೇವಋಷಿಗಳು ಹಾಗೂ ಬಸು ಅಜ್ಜಾರ ಪುಣ್ಯತಿಥಿಯ ಅಂಗವಾಗಿ 23 ವರ್ಷದೊಳಗಿನ ಪುರುಷ ಮತ್ತು ಮಹಿಳೆಯರ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಗಸ್ಟ್‌‌ 04-08-2025ನೇ ಸೋಮವಾರದಂದು ಬೆಳಗಾವಿ ಜಿಲ್ಲೆಯ, ಗೋಕಾಕ್ ತಾಲ್ಲೂಕಿನ, ಶಿಂಧಿಕುರಬೇಟ ಗ್ರಾಮದ, ವಿಠಲ ಮಂದಿರದ ಆವರಣದಲ್ಲಿ ಆಯೋಜಿಸಿಲಾಗಿದೆ.

ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ತಮ್ಮ ಜಿಲ್ಲೆಯ ಪುರುಷ ಮತ್ತು ಮಹಿಳಾ ಕುಸ್ತಿ ಪಟುಗಳು ಭಾಗವಹಿಸಲು ತಿಳಿಸಬೇಕೆಂದು ಕರ್ನಾಟಕ ಕುಸ್ತಿ ಸಂಘ (ರಿ.) ಬೆಂಗಳೂರು ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೂಚನೆಗಳು:

1.ದಿನಾಂಕ: 04-08-2025ರ ಸೋಮವಾರ ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಕುಸ್ತಿಪಟುಗಳ ದೇಹತೂಕವನ್ನು ತಗೆದುಕೊಳ್ಳಲಾಗುವುದು.

2.ಭಾಗವಹಿಸುವಂತ ಕುಸ್ತಿಪಟುಗಳಿಗೆ ದೇಹತೂಕದಲ್ಲಿ ಯಾವುದೇ ವಿನಾಯತಿ ಇರುವುದಿಲ್ಲ.

3.ಭಾಗವಹಿಸುವ ಎಲ್ಲಾ ಕುಸ್ತಿಪಟುಗಳು ಕಡ್ಡಾಯವಾಗಿ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಜನ್ಮ ಪ್ರಮಾಣಪತ್ರ, ಆಧಾರ್‌ಕಾರ್ಡ್ ಮತ್ತು WFI ಲೈಸೆನ್ಸ್ ಬುಕ್ ತರುವುದು.

4.2002 ರಿಂದ 2007ರ ವಳಗೆ ಜನಿಸಿರುವ ಕುಸ್ತಿಪಟುಗಳಿಗೆ ಮಾತ್ರ ಭಾಗವಹಿಸಲು ಅವಕಾಶ.

5.ಈ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಪ್ರಥಮ ಸ್ಥಾನಗಳಿಸಿದಂತಹ ಕುಸ್ತಿಪಟುಗಳನ್ನು ರಾಂಚಿಯಲ್ಲಿ ನಡೆಯುವಂತ 23 ವರ್ಷದೊಳಗಿನ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ಗೆ ನೇರವಾಗಿ ಆಯ್ಕೆಯಾಗುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಡಾ.ಕೆ.ವಿನೋದ್‌ಕುಮಾ‌ರ್,
ಛೇರ್ಮನ್, ತಾಂತ್ರಿಕ ಸಮಿತಿ, ಕರ್ನಾಟಕ ಕುಸ್ತಿ ಸಂಘ(ರಿ),
ಮೊ: 8971388143 / 9880087059

- Advertisement -

Related news

error: Content is protected !!