Saturday, April 20, 2024
spot_imgspot_img
spot_imgspot_img

IPL 2021: ಡೆಲ್ಲಿ ಮಣಿಸಿ ಫೈನಲ್​ಗೆ ಲಗ್ಗೆಯಿಟ್ಟ ಚೆನ್ನೈ ಸೂಪರ್​ಕಿಂಗ್ಸ್; ಧೋನಿ ಟೀಂಗೆ ರೋಚಕ ಜಯ

- Advertisement -G L Acharya panikkar
- Advertisement -
driving

ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಐಪಿಎಲ್​ನ ಕ್ವಾಲಿಫೈಯರ್ 1 ನಲ್ಲಿ ಚೆನ್ನೈ ಸೂಪರ್​ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ದವು.

ಮೊದಲಿಗೆ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಧೋನಿ ಟೀಂ ಡೆಲ್ಲಿ ಟೀಂನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು.

ಡೆಲ್ಲಿ ಪರ ಪೃಥ್ವಿ ಶಾ 60, ಧವನ್ 7, ಶ್ರೇಯಸ್ ಐಯ್ಯರ್ 1, ಅಕ್ಸರ್ 10, ಪಂತ್ 51, ಹೆಟ್ಮೆಯರ್ 37 ರನ್ ಗಳಿಸಿದ್ರು.
173 ರನ್​​ಗಳ ಬೆನ್ನು ಹತ್ತಿದ ಚೆನ್ನೈ ಸೂಪರ್​ಕಿಂಗ್ಸ್ 19.4 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿ ಗೆದ್ದು ಬೀಗಿತು. ಚೆನ್ನೈ ಟೀಂ ಪರ ರುತುರಾಜ್ ಗಾಯ್ಕ್​ವಾಡ್ 70, ಫಾಫ್ ಡುಪ್ಲೆಸಿಸ್ 1, ರಾಬಿನ್ ಉತ್ತಪ್ಪ 63, ಅಂಬಟಿ ರಾಯುಡು 1, ಮೊಯೀನ್ ಅಲಿ 16, ಎಂ.ಎಸ್. ಧೋನಿ 18 ರನ್​ ಗಳಿಸಿದ್ರು.

- Advertisement -

Related news

error: Content is protected !!