Tuesday, September 1, 2026
spot_imgspot_img
spot_imgspot_img

ಬೆಳ್ಳಾರೆ: ಕಾಣೆಯಾಗಿದ್ದ ಉದ್ಯಮಿ ಗೋವಾದಲ್ಲಿ ಪತ್ತೆ.!

- Advertisement -
- Advertisement -

ಬೆಳ್ಳಾರೆ: ಸೆ.04 ರಂದು ಕಾಣೆಯಾಗಿದ್ದ ಉದ್ಯಮಿ, ಕೃಷಿಕ ರಾಜೇಶ್ ಗುಂಡಿಗದ್ದೆ ಎಂಬವರು ಗೋವಾದಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಿಂದ ಸುಳ್ಯ ಪೇಟೆಗೆ ಹೋಗಿಬರುವುದಾಗಿ ಹೇಳಿ ಹೋದ ರಾಜೇಶ್ ವಾಪಾಸು ಬಾರದೆ ಕಾಣೆಯಾಗಿದ್ದರು. ಈ ಬಗ್ಗೆ ಅವರ ಪತ್ನಿ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಸೆ.12 ರಂದು ರಾಜೇಶರು ಗೋವಾದಲ್ಲಿರುವುದು ಪೊಲೀಸರಿಗೆ ಗೊತ್ತಾಗಿ ಅವರನ್ನು ಸೆ.13 ರಂದು ಠಾಣೆಗೆ ಕರೆತಂದಿರುವುದಾಗಿ ತಿಳಿದು ಬಂದಿದೆ. ರಾಜೇಶ್ ಸಂಪಾಜೆ, ಮಡಿಕೇರಿ ಆಗಿ ಕುಶಾಲನಗರದಿಂದ ಮೈಸೂರಿಗೆ ಹೋಗಿ ಮೈಸೂರಿನಲ್ಲಿ ತನ್ನ ಕಾರನ್ನು ನಿಲ್ಲಿಸಿ ನಂತರ ಅಲ್ಲಿಂದ ಬಸ್ಸಲ್ಲಿ ತಿರುಪತಿಗೆ ಹೋಗಿ ಗೋವಾದಲ್ಲಿದ್ದರೆಂದು ತಿಳಿದುಬಂದಿದೆ.

- Advertisement -

Related news

error: Content is protected !!