- Advertisement -
- Advertisement -
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಸೆ.1ರಿಂದ ಅನ್ವಯವಾಗುವಂತೆ ಆಟೊ ರಿಕ್ಷಾ ಪ್ರಯಾಣ ದರ ಹೆಚ್ಚಳಗೊಳಿಸಿ ದ.ಕ. ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಆದೇಶ ಹೊರಡಿಸಿದ್ದಾರೆ.

ಮೊದಲ ಒಂದುವರೆ ಕಿ.ಮೀ.ವರೆಗೆ ಕನಿಷ್ಟ ದರ 40 ರೂ. ಆಗಿದ್ದು, ಆ ಬಳಿಕ ಪ್ರತೀ ಕಿ.ಮೀ.ಗೆ 20 ರೂ. ನಿಗದಿಪಡಿಸಲಾಗಿದೆ. ಕಾಯುವ ದರ 10 ನಿಮಿಷ ಉಚಿತವಾಗಿದ್ದು, ಬಳಿಕದ 15 ನಿಮಿಷಕ್ಕೆ 5 ರೂ. ಹೆಚ್ಚಿಸಲಾಗಿದೆ. ರಿಕ್ಷಾದಲ್ಲಿ ಪ್ರಯಾಣಿಕರ ಸಂಖ್ಯೆ ಗರಿಷ್ಟ 3 ಮಂದಿಯಾಗಿರುತ್ತದೆ.
ಪ್ರಯಾಣಿಕರ ಲಗೇಜ್ ದರ 20 ಕೆಜಿಗೆ ಉಚಿತವಾಗಿದೆ. ಬಳಿಕದ 20 ಕೆಜಿಗೆ 5 ರೂ. ಹೆಚ್ಚಿಸಲಾಗಿದೆ. ರಾತ್ರಿ 10ರಿಂದ ಮುಂಜಾನೆ 5ರವರೆಗಿನ ದರವು ಹಗಲು ದರಕ್ಕಿಂತ ಒಂದುವರೆ ಪಟ್ಟು ಹೆಚ್ಚಳವಾಗಿರುತ್ತದೆ ಎಂದು ತಿಳಿಸಿದ್ದಾರೆ.
- Advertisement -








