- Advertisement -
- Advertisement -
ಬೆಳ್ತಂಗಡಿ: ಬೈಕ್ಗೆ ಪಿಕ್ಅಪ್ ವಾಹನ ಡಿಕ್ಕಿ ಹೊಡೆದು ಸವಾರ ಗಾಯಗೊಂಡ ಘಟನೆ ಕುವೆಟ್ಟು ಗ್ರಾಮದ ಮದ್ದಡ್ಕ ಎಂಬಲ್ಲಿ ನಡೆದಿದೆ.
ಗಾಯಗೊಂಡವರು ಬೆಳ್ತಂಗಡಿ ಉಜಿರೆ ನಿವಾಸಿ ಯು.ಎಚ್ ಮೊಹಮ್ಮದ್ ಎನ್ನಲಾಗಿದೆ. ಕುವೆಟ್ಟು ಗ್ರಾಮದ ಮದ್ದಡ್ಕ ಎಂಬಲ್ಲಿ ಬೈಕ್ಗೆ ಪಿಕ್ಅಪ್ ವಾಹನ ಢಿಕ್ಕಿ ಹೊಡೆದಿದೆ. ಪಿಕ್ಅಪ್ ಚಾಲಕ ಚಂದ್ರಶೇಖರ್ ಎಂಬಾತನ ನಿರ್ಲಕ್ಷ ಚಾಲನೆಯಿಂದ ಅಪಘಾತ ಸಂಭವಿಸಿದ್ದು ಸವಾರ ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ. ಗಾಯಾಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -