Saturday, July 25, 2026
spot_imgspot_img
spot_imgspot_img

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಲೇಡಿಸ್ ಪಿಜಿ ದರೋಡೆ ಪ್ರಕರಣ: ಆರು ಮಂದಿ ಅರೆಸ್ಟ್‌

- Advertisement -
- Advertisement -

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಲೇಡಿಸ್ ಪಿಜಿ ಮೇಲೆ ದಾಳಿ ಮಾಡಿ ದರೋಡೆ ಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನುಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಪಿಜಿಯಲ್ಲಿರು ಯುವತಿ ಯೋರ್ವಳಿಗೆ ಟೀ ಅಂಗಡಿಯಲ್ಲಿ ನಜಾಸ್ ಎಂಬಾತ ಪರಿಚಯವಾಗಿದ್ದ. ಆತನ ಹುಟ್ಟುಹಬ್ಬ ಆಚರಣೆ ಮಾಡಲು ಕೋ ಲಿವಿಂಗ್ ಪಿಜಿಗೆ ಯುವತಿ ಕರೆದಿದ್ದಳು. ತನ್ನ ಗೆಳೆಯನ ಜೊತೆ ನಜಾಸ್​​ ಯುವತಿ ಪಿಜಿಗೆ ಹೋಗಿದ್ದ. ಮಧ್ಯರಾತ್ರಿಯಲ್ಲಿ ಬಾಗಿಲು ತಟ್ಟಿದ್ದ ಶಬ್ದವಾಗಿದೆ. ಬಾಗಿಲು ತೆಗೆದಾಗ ನಾವು ಪೊಲೀಸರು ಅಂತ ನಾಲ್ಕೈದು ಜನರ ಗ್ಯಾಂಗ್​ ರೂಮ್​​ ಸರ್ಚ್​ ಮಾಡಿ ಯುವತಿಯರ ಬಳಿಯಿದ್ದ ಎರಡು ಮೊಬೈಲ್ ದರೋಡೆ ಮಾಡಿ 5 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಕೊಡದಿದ್ದರೆ ಮತ್ತೆ ಬರುವುದಾಗಿ ಬೆದರಿಕೆ ಹಾಕಿದ್ದರು.

ಈ ಕೃತ್ಯದ ಮಾಸ್ಟರ್ ಪ್ಲಾನನ್ನು ಯುವತಿಯ ಗೆಳೆಯ ಂಧಿತ ಆರೋಪಿ ನಜಾಸ್ ಮಾಡಿದ್ದು , ತನ್ನ ಗೆಳೆಯರಿಗೆ ಕರೆ ಮಾಡಿ ರಾಬರಿ ಪ್ಲಾನ್ ಹೇಳಿದ್ದ. ಅದರಂತೆ ಎಂಟ್ರಿ ಆಗಿದ್ದ ಐವರು ಆರೋಪಿಗಳು ಗಾಂಜಾ ಇದೆಯಾ ಅಂತ ಹೆದರಿಸಿ ಹಣ ಕೀಳಲು ಯತ್ನಿಸಿದ್ದರೂ ಹಣ ಸಿಗದಾಗ 2 ಮೊಬೈಲು ಫೋನ್‌ಗಳನ್ನು ಎಗರಿಸಿ ಪರಾರಿಯಾಗಿದ್ದರು. ಬೆಂಗಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ದರೋಡೆ ಪ್ರಕರಣದ ಆರೋಪಿಗಳಲ್ಲಿ ಹನಿ ಟ್ರಾಪ್‌ ನ ಕಿಂಗ್ ಪಿನ್ ಸೇರಿದಂತೆ ಕೇರಳ ಮೂಲದ ನಜಾಸ್, ಸರುಣ್, ಬೆಂಗಳೂರಿನ ವಿಷ್ಣು ಕೆ.ಟಿ, ದಿವಾಕರ್, ಮಧುಕುಮಾರ್, ಕಿರಣ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Related news

error: Content is protected !!