Tuesday, June 30, 2026
spot_imgspot_img
spot_imgspot_img

ಬೆಳ್ತಂಗಡಿ: ಸ್ವಿಫ್ಟ್ ಮತ್ತು ವ್ಯಾಗನರ್ ಮುಖಾಮುಖಿ ಡಿಕ್ಕಿ; ಓರ್ವನಿಗೆ ಗಾಯ

- Advertisement -
- Advertisement -

ಬೆಳ್ತಂಗಡಿ: ಸ್ವಿಫ್ಟ್ ಮತ್ತು ವ್ಯಾಗನರ್ ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಘಟನೆ ಬೆಳ್ತಂಗಡಿಯ ಮೂರು ಮಾರ್ಗದ ಬಳಿ ಆ.30 ರಂದು ರಾತ್ರಿ ನಡೆದಿದೆ.

ಶಿರ್ಲಾಲು ಗ್ರಾಮದ ಕೊಡಂಗೆ ನಿವಾಸಿ ಶಾಜಿ ಕುರಿಯನ್ ರವರು ತಮ್ಮ ವ್ಯಾಗನರ್ ವಾಹನದಲ್ಲಿ ಗುರುವಾಯನಕೆರೆಯಿಂದ ಬೆಳ್ತಂಗಡಿ ಕಡೆಗೆ ಪಯಾಣಿಸುತ್ತಿದ್ದರು. ಈ ವೇಲೆ ಉಜಿರೆಯಿಂದ ಗುರುವಾಯನಕೆರೆ ಕಡೆಗೆ ಬರುತ್ತಿದ್ದ ಸ್ವಿಫ್ಟ್ ವಾಹನಕ್ಕೆ ಡಿಕ್ಕಿಯಾಗಿದೆ. ಸ್ವಿಫ್ಟ್ ಕಾರಿನಲ್ಲಿ ಬೆಳಗಾವಿ ಜಿಲ್ಲೆಯ ಹನುಮಾಪುರ ನಿವಾಸಿಗಳಾದ ಗಂಗಪ್ಪ ರಾಮು ತಿಗಣಿ, ಪತ್ನಿ ಅನ್ನಪೂರ್ಣ ಹಾಗೂ ಪುತ್ರ ಸಂಜಯ್ ಎಂಬವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ಕಾರುಗಳ ಮುಂಭಾಗ ಜಖಂಗೊಂಡಿದೆ.ಶಾಜಿ ಕುರಿಯನ್ ರವರಿಗೆ ಗಾಯವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಿಫ್ಟ್ ವಾಹನದಲ್ಲಿರುವ ಸಹ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- Advertisement -

Related news

error: Content is protected !!