Wednesday, July 22, 2026
spot_imgspot_img
spot_imgspot_img

ಬೆಳ್ತಂಗಡಿ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

- Advertisement -
- Advertisement -

ಬೆಳ್ತಂಗಡಿ: ನೇಣು ಬಿಗಿದು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೃತಹೇಹ ಪತ್ತೆಯಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಕಸಬಾ ಗ್ರಾಮದ ನಿವಾಸಿ, ಆಟೋ ಚಾಲಕರಾಗಿದ್ದ ಅಬ್ದುಲ್ ಬಶೀರ್ (50) ಎಂದು ಗುರುತಿಸಲಾಗಿದೆ.

ಘಟನೆಯ ವಿವರಗಳ ಪ್ರಕಾರ, ಮೃತರ ಪುತ್ರ ಸೂಹೆಲ್ (25) ಅವರು ನೀಡಿದ ದೂರಿನಲ್ಲಿ. ತಂದೆ ಅಬ್ದುಲ್ ಬಶೀರ್ ಅವರು ಆಟೋ ಚಾಲನೆ ವೃತ್ತಿ ಮಾಡಿಕೊಂಡಿದ್ದು, ನ.6ರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದ ವೇಳೆ ತಂದೆ ಸೇರಿದಂತೆ ಮನೆಯವರು ನಿದ್ರೆಯಲ್ಲಿದ್ದರು ಎಂದು ತಿಳಿಸಲಾಗಿದೆ.

ನ.6ರಂದು ಬೆಳಗ್ಗೆ ಸೂಹೆಲ್ ಅವರ ಸಹೋದರ ಮಹಮ್ಮದ್ ಸುಪಿಯಾನ್ ಶೌಚಾಲಯಕ್ಕೆ ತೆರಳಿದಾಗ, ಒಳಗಿನಿಂದ ಚಿಲಕ ಹಾಕಲ್ಪಟ್ಟು ಕರೆ ನೀಡಿದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಬಾಗಿಲು ಬಲವಂತವಾಗಿ ತೆರೆದಾಗ, ಅಬ್ದುಲ್ ಬಶೀರ್ ಅವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ತಕ್ಷಣವೇ ಕುಟುಂಬಸ್ಥರು ಅವರನ್ನು ಕೆಳಗಿಳಿಸಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ನಂ: 37/2025 ಹಾಗೂ ಕಲಂ 194 BNSS 2023 ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!