Tuesday, July 21, 2026
spot_imgspot_img
spot_imgspot_img

ಬೆಳ್ತಂಗಡಿ: ಅಂಗಡಿಗೆ ಬರುತ್ತಿದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಪೊಕ್ಸೋ ಪ್ರಕರಣ ದಾಖಲು

- Advertisement -
- Advertisement -


ಬೆಳ್ತಂಗಡಿ: ಅಂಗಡಿಗೆ ಬರುತ್ತಿದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಅಂಗಡಿ ಮಾಲಕನೊಬ್ಬನ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪೊಕ್ಸೋ ಪ್ರಕರಣ ದಾಖಲಾಗಿದೆ. ಟಿಕ್ಕಾ ಮುಹಮ್ಮದ್ ಗೇರುಕಟ್ಟೆ ಎಂಬಾತನೇ ಆರೋಪಿ.

ಸಂತ್ರಸ್ಥ ಬಾಲಕಿ ಅಂಗಡಿಗೆ ಹೋದಾಗ ಆರೋಪಿಯು ಆಕೆಯ ಮೇಲೆ ಲೈಂಗಿಕ ಕಿರುಕುಳ ಎಸಗುತ್ತಿದ್ದ. ಮೂರ್ನಾಲ್ಕು ಬಾರಿ ಇದೇ ರೀತಿ ಕಿರುಕುಳ ನೀಡಿದ್ದು, ಈ ಬಗ್ಗೆ ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಮಧ್ಯೆ ಬಾಲಕಿಯು ಒಂದು ದಿನ ಬೀಗ ತೆರೆದಿದ್ದ ಅಂಗಡಿಯ ಒಳಗೆ ಪ್ರವೇಶಿಸಿ ಹೊರಬರುತ್ತಿದ್ದ ವೇಳೆ ದಾಖಲಾಗಿದ್ದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಆರೋಪಿ ಬೇರೆಯವರಿಗೆ ಕಳುಹಿಸಿ ಆಕೆ ಕಳ್ಳಿ ಎಂದು ಬಿಂಬಿಸುವ ಯತ್ನ ಮಾಡಿದ್ದಾನೆ ಎಂದೂ ದೂರಲಾಗಿದೆ.

ನೊಂದ ಬಾಲಕಿ ನೀಡಿದ ದೂರಿನಂತೆ ಮುಹಮ್ಮದ್ ಗೇರುಕಟ್ಟೆ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Related news

error: Content is protected !!