Wednesday, July 22, 2026
spot_imgspot_img
spot_imgspot_img

ದಿಲ್ಲಿಯಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ವಿಮಾನದ ಶೌಚಾಲಯದಲ್ಲಿ ಧೂಮಪಾನ ಸೇದಿದ ಪ್ರಯಾಣಿಕ; ಪ್ರಕರಣ ದಾಖಲು

- Advertisement -
- Advertisement -

ಪಣಜಿ: ದಿಲ್ಲಿಯಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ಅಕಾಸಾ ಏ‌ರ್ ವಿಮಾನದ ಶೌಚಾಲಯದಲ್ಲಿ ‘ಬೀಡಿ’ ಸೇದಿದ ಆರೋಪದ ಮೇಲೆ ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿಲ್ಲಿ ನಿವಾಸಿ ಆಶಿಶ್ ಎಂಬಾತ ಶನಿವಾರ ರಾಷ್ಟ್ರದ ರಾಜಧಾನಿಯಿಂದ ರಾಜ್ಯ ಗೋವಾಕ್ಕೆ ಹೊರಟಿದ್ದ ಅಕಾಸಾ ಏರ್ ನ QP1625 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.ವಿಮಾನಯಾನ ಸಂಸ್ಥೆ ನೀಡಿದ ದೂರಿನ ಪ್ರಕಾರ, ಪ್ರಯಾಣಿಕ ವಿಮಾನದ ಶೌಚಾಲಯದೊಳಗೆ ‘ಬೀಡಿ’ ಸೇದಿರುವುದು ಪತ್ತೆಯಾಗಿದೆ. ಆತನ ಬಳಿ ಲೈಟರ್ ಕೂಡ ಪತ್ತೆಯಾಗಿದೆ. ಹಾರಾಟದ ವೇಳೆ ಇಂತಹ ಕೃತ್ಯವು ವಿಮಾನ ಹಾಗೂ ಅದರಲ್ಲಿದ್ದ ಪ್ರಯಾಣಿಕರ ಸುರಕ್ಷತೆಗೆ ಅಪಾಯ ಉಂಟುಮಾಡುವ ಸಾಧ್ಯತೆ ಇದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ.ಈ ಕೃತ್ಯದಿಂದ ಸಹ ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರ ಸುರಕ್ಷತೆಗೆ ಅಪಾಯ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಭಾರತೀಯ ನ್ಯಾಯ ಸಂಹಿತೆ ಹಾಗೂ ನಾಗರಿಕ ವಿಮಾನಯಾನ ಸುರಕ್ಷತೆ ಕಾಯ್ದೆಯಡಿ ಕಾನೂನುಬಾಹಿರ ಕೃತ್ಯಗಳ ನಿಗ್ರಹಕ್ಕೆ ಸಂಬಂಧಿಸಿದ ನಿಬಂಧನೆಗಳ ಅಡಿಯಲ್ಲಿ ಗೋವಾದ ಮೋಪಾ ವಿಮಾನ ನಿಲ್ದಾಣ ಪೊಲೀಸ್‌ ಠಾಣೆಯಲ್ಲಿ ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಘಟನೆಯನ್ನು ಅಕಾಸಾ ಏರ್ ಸಂಸ್ಥೆಯೂ ದೃಢಪಡಿಸಿದೆ. ‘ಮಾರ್ಚ್ 7ರಂದು ದಿಲ್ಲಿಯಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ಅಕಾಸಾ ಏರ್ ವಿಮಾನ QP1625ನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಪ್ರಯಾಣಿಕ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿರುವುದು ಪತ್ತೆಯಾಗಿದೆ’ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.ಸ್ಥಾಪಿತ ಸುರಕ್ಷತೆ ಹಾಗೂ ನಿಯಂತ್ರಣ ಕ್ರಮಗಳಿಗೆ ಅನುಗುಣವಾಗಿ ಸಂಸ್ಥೆಯ ಸಿಬ್ಬಂದಿ ಅಗತ್ಯ ಶಿಷ್ಟಾಚಾರಗಳನ್ನು ಅನುಸರಿಸಿದ್ದಾರೆ. ವಿಮಾನ ಗೋವಾಕ್ಕೆ ತಲುಪಿದ ಬಳಿಕ ಪ್ರಯಾಣಿಕನನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.ಈ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅಕಾಸಾ ಏರ್ ಹೇಳಿದೆ.

- Advertisement -

Related news

error: Content is protected !!