Tuesday, June 23, 2026
spot_imgspot_img
spot_imgspot_img

ಬೆಳ್ತಂಗಡಿ: ವಾಯ್ಸ್ ಅಫ್‌ ಆರಾಧನ ಮೂಡಬಿದ್ರೆ ಹಾಗೂ ಶ್ರೀ ಕೃಷ್ಣ ಸೇವಾ ಸಮಿತಿ (ರಿ) ಪುತ್ತೂರು ಇದರ ಸಹಭಾಗಿತ್ವದಲ್ಲಿ 2 ಬಾಲಪ್ರತಿಭೆಗಳಿಗೆ ಸನ್ಮಾನ

- Advertisement -
- Advertisement -

ಬೆಳ್ತಂಗಡಿ: ವಾಯ್ಸ್ ಅಫ್‌ ಆರಾಧನ ಮೂಡಬಿದ್ರೆ ಹಾಗೂ ಶ್ರೀ ಕೃಷ್ಣ ಸೇವಾ ಸಮಿತಿ (ರಿ ) ಸಿಟಿಗುಡ್ಡೆ ಪುತ್ತೂರು ಇದರ ಸಹಭಾಗಿತ್ವದಲ್ಲಿ ಕೊಕ್ಕಡ ಹಾಗೂ ಅರಸಿನ ಮಕ್ಕಿ ಬಳಿ ಸಂಪ್ಯಾಡಿ ಎಂಬಲ್ಲಿ 2 ಬಾಲ ಪ್ರತಿಭೆಗಳ ಮನೆಗೆ ಭೇಟಿ ಕೊಟ್ಟು ಸನ್ಮಾನಿಸಲಾಯಿತು.

ಕೊಕ್ಕಡದ ಬಾಲ ಪ್ರತಿಭೆ ವಿಷ್ಣುಪ್ರಿಯ ಮತ್ತು ಅರಸಿನ ಮಕ್ಕಿ ಬಳಿ ಸಂಪ್ಯಾಡಿಯ ಬಾಲಪ್ರತಿಭೆ ಅರ್ಚನಾ ಅವರನ್ನು ಫಲಾ ಪುಷ್ಪಾ ನೀಡಿ ಶಾಲು ಹೊದಿಸಿ ಹಾರ ಹಾಕಿ ಪೇಟ ತೊಡಿಸಿ ಅವರ ಸಾಧನೆ ಯ ಸಾಲಿನ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.

ಈ ವೇಳೆ ಮುಖ್ಯ ಅತಿಥಿಯಾಗಿ ಜೆಪಿ ಸಂತೋಷ್ ಮುರ , ವಾಯ್ಸ್ ಆಫ್ ಆರಾಧನಾ ಇದರ ಸದಸ್ಯ ನವೀನ್ ಪುತ್ತೂರು, ಶ್ರೀ ಕೃಷ್ಣ ಯುವಕ ಮಂಡಲ ರಿಜಿಸ್ಟರ್ ಪುತ್ತೂರು ಇದರ ಅಧ್ಯಕ್ಷ ರಾಜೀವ್ ಗೌಡ ಸಿಟಿ ಗುಡ್ಡೆ, ಕಲಾವಿದ ಕೃಷ್ಣಪ್ಪ ಶಿವನಗರ ಹಾಗೂ ಅವರು ಭಾಗವಹಿಸಿದ್ದರು.

ಅರ್ಚನಾ ಸಂಪ್ಯಾಡಿ ಅವರ ಹುಟ್ಟುಹಬ್ಬ ಇದ್ದುದರಿಂದ ಅದರ ಸಲುವಾಗಿ ಪುತ್ತೂರಿನ ಮಂಜಲ್ಪಡ್ಪು ಅಂಗನವಾಡಿ ಕೇಂದ್ರದಲ್ಲಿ ಕೇಕ್ ಕತ್ತರಿಸಿ ಮಕ್ಕಳ ಜೊತೆಯಲ್ಲಿ ಸಂಭ್ರಮಿಸಲಾಯಿತು.

- Advertisement -

Related news

error: Content is protected !!