- Advertisement -
- Advertisement -
ಮಂಗಳೂರು:-ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೊರೋನಾ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಮಂಗಳವಾರದಿಂದ ಮಧ್ಯಾಹ್ನ ಬಳಿಕ ಬೆಳ್ತಂಗಡಿ ತಾಲೂಕು ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತಿಳಿಸಿದ್ದಾರೆ.
ಇಂದು ನಡೆದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇತೃತ್ವದ ಸಭೆಯಲ್ಲಿ ವ್ಯಾಪಾರಸ್ಥರು, ಅಂಗಡಿ ಮಾಲಕರು, ಆಟೋ, ಬಸ್ ಸೇರಿ ಎಲ್ಲರಿಂದಲೂ ಸ್ವಯಂ ಘೋಷಿತ ಬಂದ್ ಗೆ ಬೆಂಬಲ ವಕ್ತಪಡಿಸಿದ್ದರು. ಮಧ್ಯಾಹ್ನ 2 ಗಂಟೆಯಿಂದ 15 ದಿನಗಳ ಕಾಲ ಇಡೀ ತಾಲೂಕು ಬಂದ್ ಮಾಡಲಾಗುವುದು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇತೃತ್ವದ ಸಭೆಯಲ್ಲಿ ನಿರ್ಧಾರ ಮಾಡಲಾಯಿತು.
- Advertisement -