Saturday, July 25, 2026
spot_imgspot_img
spot_imgspot_img

17 ಕಾರುಗಳ ಗಾಜು ಪುಡಿ ಮಾಡಿದ ಪ್ರಕರಣ; 5 ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ

- Advertisement -
- Advertisement -

ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗ್ಲಾಸ್ ಒಡೆದು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ವಿದ್ಯಾರ್ಥಿಗಳನ್ನು ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಐವರು ಕೂಡ ಉತ್ತರ ಭಾರತ ಮೂಲದ ವಿದ್ಯಾರ್ಥಿಗಳು. ಕಂಠಪೂರ್ತಿ ಕುಡಿದು ಕಾರುಗಳ ಗ್ಲಾಸ್ ಗಳನ್ನು ಆರೋಪಿಗಳು ಪುಡಿ ಪುಡಿ ಮಾಡಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಆರ್‌ಆರ್ ನಗರ ಠಾಣಾ ಪೊಲೀಸರು ಇದೀಗ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಐದು ಜನ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ಓದುತ್ತಿದ್ದರು. ಏಳನೇ ಸಮಿಸ್ಟರ್ ವಿದ್ಯಾರ್ಥಿಗಳಾಗಿದ್ದಾರೆ. ಕೆಂಗೇರಿಯಲ್ಲಿ ಐದು ಜನ ಬರ್ತಡೇ ಪಾರ್ಟಿ ಮಾಡಿದ್ದರು. ಪಾರ್ಟಿಯಲ್ಲಿ ಫುಲ್ ಟೈಟ್ ಆಗಿದ್ದ ಆರೋಪಿಗಳು ಬಳಿಕ ಬ್ಯಾಟ್ ತೆಗೆದುಕೊಂಡು ಆರ್ ಆರ್ ನಗರ, ಕೆಂಗೇರಿಯಲ್ಲಿ 17 ಕಾರುಗಳ ಗ್ಲಾಸ್ ಅನ್ನು ಪುಡಿ ಪುಡಿ ಮಾಡಿದ್ದರು. ಸದ್ಯ ಆರೋಪಿಗಳ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!