Thursday, April 18, 2024
spot_imgspot_img
spot_imgspot_img

ಬೆಂಗಳೂರು: ಚಿತಾಗಾರದಲ್ಲಿ ಕಳೆದ 2 ವಾರದಲ್ಲಿ ಬರೋಬ್ಬರಿ 1,400 ಶವಗಳ ದಹನ

- Advertisement -G L Acharya panikkar
- Advertisement -

ಬೆಂಗಳೂರು: ಕಳೆದ ಎರಡು ವಾರಗಳಲ್ಲಿ ಬೆಂಗಳೂರಿನ ಚಿತಾಗಾರದಲ್ಲಿ 1,400 ಶವಗಳನ್ನು ಸುಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಏಪ್ರಿಲ್ ಒಂದೇ ತಿಂಗಳಲ್ಲಿ 1812 ಮಂದಿ ಕೊರೊನಾ ಸೋಂಕಿನಿAದ ಮೃತಪಟ್ಟಿದ್ದರು, ಸೆಪ್ಟೆಂಬರ್ 2020ರಲ್ಲಿ 971 ಮಂದಿ ಸಾವನ್ನಪ್ಪಿದ್ದರು. ಕಳೆದ 15 ದಿನಗಳಲ್ಲಿ 179 ಮಂದಿ ಮೃತಪಟ್ಟಿದ್ದಾರೆ.

ಕೊರೋನಾ 2ನೇ ಆರಂಭವಾದಾಗಿನಿ0ದಲೂ ಬಿಬಿಎಂಪಿಗೆ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಲೇ ಇದೆ. ನಗರದಲ್ಲಿ ಕೊರೊನಾ ಸಾವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಮೊದಲು ಸ್ಥಳದ ಅಭಾವ. ನಂತರ ಮೃತದೇಹ ಶವಸಂಸ್ಕಾರದ ವಿಳಂಬ ಸಮಸ್ಯೆಯಾಗಿ ಬಿಬಿಎಂಪಿಯನ್ನು ಕಾಡಿತ್ತು. ಇದೀಗ ಉರುವಲು ಕೊರತೆ ಸಮಸ್ಯೆ ಶುರುವಾಗತೊಡಗಿದೆ.

ಈ ಪರಿಸ್ಥಿತಿ ಕುರಿತು ಇದೀಗ ರಾಜ್ಯ ಅರಣ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಅರಣ್ಯ ವ್ಯಾಪ್ತಿಯಲ್ಲಿ ಇದೀಗ ಕೇವಲ 150 ಟನ್ ನಷ್ಟು ಮರಗಳು ಮಾತ್ರ ಬಾಕಿ ಉಳಿದಿವೆ.

ಸರ್ಕಾರ ಈಗಾಗಲೇ ಮೂರು ತಾತ್ಕಾಲಿಕ ಶವಾಗಾರವನ್ನು ತೆರೆದಿದ್ದು, ಈ ಶವಾಗಾರಗಳಲ್ಲಿ 10 ದಿನಗಳಲ್ಲಿ 200 ಟನ್ ನಷ್ಟು ಮರಗಳನ್ನು ಬಳಕೆ ಮಾಡಲಾಗಿದೆ. ಒಬ್ಬ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ 1,300-1,500 ಕೆಜಿ ಮರದ ಅಗತ್ಯವಿದೆ ಎಂದು ಹೇಳಿದ್ದಾರೆ.

ಪ್ರತೀ ಶವಾಗಾರದಲ್ಲಿ ಒಂದು ದಿನಕ್ಕೆ 42 ಶವಗಳನ್ನು ಸುಡಲಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದಿದ್ದೇ ಆದರೆ, ಶವಗಳ ಅಂತ್ಯಸ0ಸ್ಕಾರಕ್ಕೆ ಉರುವಲು ಕೊರತೆ ಎದುರಾಗಲಿದೆ. ಹೀಗಾಗಿ ನಮಗೆ ಬೇರೆ ದಾರಿಯಿಲ್ಲ. ಪರಿಸ್ಥಿತಿ ನಿಭಾಯಿಸಲು ಮರಗಳನ್ನು ಕಡಿಯಲೇ ಬೇಕಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

- Advertisement -

Related news

error: Content is protected !!