Sunday, June 7, 2026
spot_imgspot_img
spot_imgspot_img

ಬೆಂಗಳೂರು: ದೈವಾರಾಧನೆ ಕ್ಷೇತ್ರದಲ್ಲಿ ಸೇವೆ ಮಾಡುವವರಿಗೆ ಮಾಶಾಸನ ನೀಡುವ ಬಗ್ಗೆ ವಿಧಾನ ಸಭೆಯಲ್ಲಿ ಸಮಾಲೋಚನಾ ಸಭೆ

- Advertisement -
- Advertisement -

ದೈವಾರಾಧನೆ ಕ್ಷೇತ್ರದಲ್ಲಿ ದೈವದ ಚಾಕರಿ ಮಾಡುವವರಿಗೆ ಮಾಶಾಸನ ನೀಡುವ ಬಗ್ಗೆ ವಿಧಾನಸಭಾ ಸ್ಪೀಕರ್‌ ಯು ಟಿ ಖಾದರ್‌ ನೇತೃತ್ವದಲ್ಲಿ ಮುಜುರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿಯವರ ಜೊತೆ ಬೆಂಗಳೂರು ವಿಧಾನ ಸಭಾ ಕಛೇರಿಯಲ್ಲಿ ಸಮಾಲೋಚನಾ ಸಭೆ ನಡೆಯಿತು.

ಸಭೆಯಲ್ಲಿ ದೈವದ ಚಾಕರಿ ಮಾಡುವವರಿಗೆ ಮಾಶಾಸನ ನೀಡುವ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಕುದ್ರೋಳಿ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರರು, ಉಳ್ಳಾಲ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರರು, ಹಾಗೂ ಹಲವು ದೈವ ನರ್ತಕರು, ಹಿರಿಯ ದೈವನರ್ತಕ ಮಾಯಿಲ ಕುತ್ತಾರ್‌, ಉಳ್ಲಾಲ ಭವವತೀ ಕ್ಷೇತ್ರದ ಮೊಕ್ತೇಸರರು ಸುರೇಶ್ ಭನಗರ್‌, ಭಾರತೀಯ ತಿಯಾ ಸಮಾಜ ಉಳ್ಳಾಲ ಕ್ಷೇತ್ರದ ಅಧ್ಯಕ್ಷ ಎಂ ದಿನೇಶ್‌ ಕುಂಪಲ ಉಪಸ್ಥಿತರಿದ್ದರು.

- Advertisement -

Related news

error: Content is protected !!