Tuesday, July 21, 2026
spot_imgspot_img
spot_imgspot_img

ಬೆಂಗಳೂರು: ಜೈಲಿನಲ್ಲಿ ಮಹಿಳಾ ಖೈದಿಗಳ ಡ್ರಗ್ಸ್ ಟೆಸ್ಟ್ ಪಾಸಿಟಿವ್!

- Advertisement -
- Advertisement -

ಬೆಂಗಳೂರು: ಡಿಜಿಪಿ ಅಲೋಕ್ ಕುಮಾರ್ ಜೈಲುಗಳಲ್ಲಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕೆಲಸ ಮಾಡುತ್ತಿರುವುದರ ಮಧ್ಯೆ ಜೈಲಿನಲ್ಲಿ ಮಹಿಳಾ ಖೈದಿಗಳ ಡ್ರಗ್ಸ್ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿರುವುದಾಗಿ ತಿಳಿದುಬಂದಿದೆ.

ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಜೈಲಿನಲ್ಲಿ ಅಕ್ರಮಗಳಿಗೆ ಬ್ರೇಕ್ ಹಾಕುವ ಕೆಲಸ ಮಾಡಿದ್ದರು. ಆದರೆ ಜೈಲಿನ ಬ್ಯಾರಕ್‌ಗಳ ಒಳಗೆ ನಶೆ ಏರಿಸುವ ಡ್ರಗ್ಸ್‌ನ್ನು ಇನ್ನೂ ಬಚ್ಚಿಟ್ಟಿರುವ ಸಾಧ್ಯತೆ ದಟ್ಟವಾಗಿದೆ.

ಕೆಲ ಮಹಿಳಾ ಖೈದಿಗಳ ಡ್ರಗ್ ಪರೀಕ್ಷಾ ವರದಿಗಳು ಪಾಸಿಟಿವ್ ಬಂದಿರುವುದನ್ನು ಕಂಡು ಅಧಿಕಾರಿಗಳೇ ಶಾಕ್ ಆಗಿದ್ದು, ಮಹಿಳಾ ಬ್ಯಾರಕ್‌ಗಳೊಳಗೆ ಡ್ರಗ್ಸ್ ಹೇಗೆ ತಲುಪಿದವು ಎಂಬ ಪ್ರಶ್ನೆ ಈಗ ಎದುರಾಗಿದೆ. ಪುರುಷ ಕೈದಿಗಳಷ್ಟೇ ಅಲ್ಲದೆ, ಮಹಿಳಾ ಕೈದಿಗಳಿಂದಲೂ ಡ್ರಗ್ಸ್ ಸೇವನೆ ನಡೆದಿರುವ ಸಾಧ್ಯತೆ ಇದ್ದು, ಸೆಕೆಂಡ್ ಒಪೀನಿಯನ್‌ಗಾಗಿ ನಿಮ್ಹಾನ್ಸ್‌ಗೆ ವರದಿ ಕಳಿಸಲಾಗಿದೆ.

ಸುಮಾರು 20 ಕೈದಿಗಳು ಮೂತ್ರ ಮಾದರಿ ನೀಡಲು ನಿರಾಕರಿಸಿದ್ದಾರೆ. ಡ್ರಗ್ಸ್ ಪರೀಕ್ಷಾ ವರದಿ ಪಾಸಿಟಿವ್ ಬರುವ ಭೀತಿಯಿಂದಲೇ ಅವರು ಯೂರಿನ್ ನೀಡಲು ಹಿಂದೇಟು ಹಾಕಿದ್ದು, ಜೈಲು ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ ಎನ್ನಲಾಗಿದೆ. ಇಂತಹ ಕೈದಿಗಳ ಮನವೊಲಿಸಿ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!