Sunday, June 14, 2026
spot_imgspot_img
spot_imgspot_img

ಬೆಂಗಳೂರು: ಕಡಬದ ಯುವನಟ ಮಹೇಶ್‌ ರಾಜ್ ಅಭಿನಯದ ‘ಕಮರೊ2’ ರಾಜ್ಯಾದ್ಯಂತ ಬಿಡುಗಡೆ

- Advertisement -
- Advertisement -

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಶೈಲಿಯ ಕಥಾಹಂದರವನ್ನು ಒಳಗೊಂಡ ‘ಕಮರೊ2’ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ತೀರಾ ಅಪರೂಪದ ಪ್ಯಾರಾ ನಾರ್ಮಲ್ ಹಾರರ್ ಕಥಾ ಹಂದರವನ್ನು ಹೊಂದಿರುವ ‘ಕಮರೊಟ್ಟು’ ಚಿತ್ರದ ಮುಂದುವರಿದ ಭಾಗವಾಗಿರುವ ‘ಕಮರೊ2’ ಪರಮೇಶ್ ನಿರ್ದೇಶಿಸಿದ್ದು, ಪವನ್ ಗೌಡ ನಿರ್ಮಾಣ ಮಾಡಿದ್ದಾರೆ.

ಮುಖ್ಯ ಪಾತ್ರದಲ್ಲಿ ಕಡಬ ತಾಲೂಕಿನ ಕೋರಿಯಾರ್ ನಿವಾಸಿ ಮಹೇಶ್‌ ರಾಜ್ ಸೇರಿದಂತೆ ನೀನಾಸಂ ಅಶ್ವಥ್, ನಾಗೇಂದ್ರ ಅರಸ್, ಬೇಬಿ ಖುಷಿ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, ರಾಘವೇಂದ್ರ ರಾಜ್ ಕುಮಾ‌ರ್ ಬಣ್ಣ ಹಚ್ಚಿದ್ದಾರೆ.

ಮಹೇಶ್‌ ರಾಜ್ ಅವರು ಈ ಹಿಂದೆ ಮಾಮು ಟೀ ಅಂಗಡಿ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಪ್ರಸ್ತುತ ಬೆಂಗಳೂರಿನಲ್ಲಿ ಡ್ಯಾನ್ಸ್ ಅಕಾಡೆಮಿ ನಡೆಸುತ್ತಿದ್ದು, ‘ಕಮರೊ2’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

- Advertisement -

Related news

error: Content is protected !!