- Advertisement -
- Advertisement -
ಬೆಂಗಳೂರು: ಮಂಗಳವಾರ ರಾತ್ರಿ 8 ಗಂಟೆಯಿಂದ ಸಿಲಿಕಾನ್ ಸಿಟಿ ಸಂಪೂರ್ಣ ಲಾಕ್ ಡೌನ್ ಆಗಿದೆ. ನಿನ್ನೆ ರಾತ್ರಿಯೇ ಪೊಲೀಸರು ರಸ್ತೆಗಳನೆಲ್ಲ ಸಂಪೂರ್ಣ ಬಂದ್ ಮಾಡಿದ್ದು, ಜನರ ಓಡಾಟ ವಿರಳವಾಗಿದೆ.
ಮಲ್ಲೇಶ್ವರ ಸೇರಿದಂತೆ ಹಲವೆಡೆ ಅನಗತ್ಯವಾಗಿ ರಸ್ತೆಗಿಳಿದ ವಾಹವನ್ನು ಪೊಲೀಸ್ ಸೀಜ್ ಮಾಡಿದ್ದಾರೆ. ಇನ್ನು ಆನಂದ್ ರಾವ್ ಸರ್ಕಲ್ ಬಳಿ ಅಗತ್ಯ ವಾಹನಗಳ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಒದಗಿಸಲಾಗಿದೆ. ನಗರದ ಹಲವಾರು ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಮುಚ್ಚಲಾಗಿದ್ದು, ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿದೆ.
ಮಧ್ಯಾಹ್ನ 12ಯೊಳಗೆ ಎಲ್ಲ ಅಂಗಡಿ ಮುಚ್ಚುವಂತೆ ಆದೇಶ
ಬೆಳ್ಳಗೆ 5 ಗಂಟೆಯಿಂದ 12 ಗಂಟೆ ತನಕ ಮಾತ್ರ ದಿನಸಿ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. 12 ಗಂಟೆಯ ನಂತರ ಯಾವುದೇ ಕಾರಣಕ್ಕೂ ಅಂಗಡಿಗಳು ತೆರೆಯಲು ಅವಕಾಶವಿಲ್ಲ. ಫುಡ್ ಡೆಲಿವರಿಯವರು ರಾತ್ರಿ 8ಕ್ಕೆ ತಮ್ಮ ಸೇವೆ ನಿಲ್ಲಿಸಬೇಕು. ಮೆಡಿಕಲ್ ಶಾಪ್ಗಳು ಮಾತ್ರ ರಾತ್ರಿವರೆಗೂ ಸೇವೆ ಸಲ್ಲಿಸಬಹುದು ಎಂದು ಕಮಿಷನರ್ ಆದೇಶ ಹೊರಡಿಸಿದ್ದಾರೆ.
- Advertisement -