Monday, April 29, 2024
spot_imgspot_img
spot_imgspot_img

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಇದರ ವಾರ್ಷಿಕ ಮಹಾಸಭೆ

- Advertisement -G L Acharya panikkar
- Advertisement -
vtv vitla

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲಇದರ ವಾರ್ಷಿಕ ಮಹಾಸಭೆಯು ಜೂ.27ರಂದು ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಸುದರ್ಶನ್ ಪಡಿಯಾರ್ ಅವರು ವಹಿಸಿಕೊಂಡರು. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಜಿಲ್ಲಾ ಆಯುಕ್ತರಾಮಶೇಷ ಶೆಟ್ಟಿ ಉದ್ಘಾಟಿಸಿದರು. ಅತಿಥಿಗಳಾಗಿ ಜಿಲ್ಲಾ ಸಂಸ್ಥೆಯಿಂದ ರಾಜ್ಯ ಸಂಘಟನಾ ಆಯುಕ್ತ ಭರತ್ ರಾಜ್, ಜಿಲ್ಲಾ ಕಾರ್ಯದರ್ಶಿ ಎಂ ಜೆ ಕಜೆ, ಪ್ರಭಾರ ಜಂಟಿ ಕಾರ್ಯದರ್ಶಿ ಜಯವಂತಿ ಸೋನ್ಸ್ ಆಗಮಿಸಿದ್ದರು.

2022-23ರಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಅಳಿಕೆ ವಿದ್ಯಾಸಂಸ್ಥೆಯ ಸ್ಕೌಟ್ ವಿದ್ಯಾರ್ಥಿ ಅನ್ವಿತ್ ರೈ ಹಾಗೂ ಸಂತ ರೀಟಾ ವಿದ್ಯಾಸಂಸ್ಥೆಯ ವಿಯಾನ ವೇಗಸ್ ರವರನ್ನು ಸನ್ಮಾನಿಸಲಾಯಿತು. ಹಾಗೆಯೇ 2022-23ನೇ ಸಾಲಿನ ರಾಜ್ಯ ಪುರಸ್ಕಾರ ತೃತೀಯ ಸೋಪಾನ ಪರೀಕ್ಷೆ ಪೂರ್ಣಗೊಳಿಸಿದ ಸ್ಕೌಟ್ ಗೈಡ್ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕುದ್ದುಪದವು ಕ್ಲಸ್ಟರ್ ನ ಸಿಆರ್‌‍ಪಿ ಪುಷ್ಪ, ಕಂಬಳಬೆಟ್ಟು, ಕ್ಲಸ್ಟರ್ ಸಿಆರ್‌‍ಪಿ ಜ್ಯೋತಿ, ಮಂಚಿ ಕ್ಲಸ್ಟರ್ ಸಿಆರ್‌‍ಪಿ ಇಂದಿರಾ, ವಿಟ್ಲ ಕ್ಲಸ್ಟರ್ ಸಿಆರ್‌‍ಪಿ ಬಿಂದು ಉಪಸ್ಥಿತರಿದ್ದರು. ವಿಟ್ಲ ಸ್ಥಳೀಯ ಸಂಸ್ಥೆಯ ಗೌರವಾಧ್ಯಕ್ಷ ಪ್ರಭಾಕರ ದಂಬೆ ಕಾನ, ಉಪಾಧ್ಯಕ್ಷಜಯರಾಮ ಬಲ್ಲಾಳ್, ಜೆಸಿಂತಾ ಮಸ್ಕರೇನಸ್, ವಿಠಲ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಕಿರಣ್ ಕುಮಾರ್ ಉಪಸ್ಥಿತರಿದ್ದರು.

ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಸ್ಕೌಟ್ ಮಾಸ್ಟರ್ ಪ್ರತೀಪ್ ಅತಿಥಿಗಳನ್ನು ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಜಯಶ್ರೀ ವಾರ್ಷಿಕ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ವಿಶ್ವನಾಥ ಧನ್ಯವಾದ ಗೈದರು. ಸ್ಕೌಟ್ ಮಾಸ್ಟರ್ ನಾರಾಯಣ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

- Advertisement -

Related news

error: Content is protected !!